ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಅಸಹಜ ಲೈಂಗಿಕ ದೌರ್ಜನ್ಯ ಪ್ರಕಾರ ಸಂಬಂಧಿಸಿದಂತೆ ಎಂಎಲ್ಸಿ ಸೂರಜ್ ರೇವಣ್ಣ ಇದೀಗ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಇದೀಗ ಮಕ್ಕಳನ್ನು ನೋಡಲು ಶಾಸಕ ಎಚ್ ಡಿ ರೇವಣ್ಣ ಹಾಗೂ ಭವಾನಿ ರೇವಣ್ಣ ಜೈಲಿಗೆ ಆಗಮಿಸಿದ್ದಾರೆ.
ಹೌದು ಪರಪ್ಪನ ಅಗ್ರಹಾರ ಜೈಲಿಗೆ ಬಂದ ರೇವಣ್ಣ ದಂಪತಿಗಳು ಅತ್ಯಾಚಾರ ಆರೋಪ ಕೇಸ್ ನಲ್ಲಿ ಪ್ರಜ್ವಲ್ ರೇವಣ್ಣ ಜೈಲುಪಾಲಾಗಿದ್ದು, ಇನ್ನೂ ಅವರ ಸಹೋದರ ಸೂರಜ್ ರೇವಣ್ಣ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೇನು ಸೇರಿದ್ದಾರೆ.
ಸದ್ಯ ಇಬ್ಬರು ಮಕ್ಕಳು ಒಂದೆ ಜೈಲಿನಲ್ಲಿ ಇದ್ದಿದ್ದರಿಂದ ಅವರನ್ನು ನೋಡಲು ಎಚ್ ಡಿ ರೇವಣ್ಣ ಹಾಗೂ ಭವಾನಿ ರೇವಣ್ಣ ಪರಪ್ಪನ ಅಗ್ರಹಾರ ಜೈಲಿಗೆ ಆಗಮಿಸಿದ್ದಾರೆ. ಹೊಟ್ಟೆ ನೋವಿನಿಂದ ನೆನ್ನೆ ಜೈಲಿನ ಆಸ್ಪತ್ರೆಗೆ ಸೂರಜ್ ರೇವಣ್ಣ ದಾಖಲಾಗಿದ್ದರು. ಹಾಗಾಗಿ ಪ್ರಜ್ವಲ್ ಮತ್ತು ಸೂರಜ್ ಭೇಟಿಗೆ ಎಚ್ ಡಿ ರೇವಣ್ಣ ಭವಾನಿ ದಂಪತಿ ಬಂದಿದ್ದಾರೆ.