- ರೇವ್ ಪಾರ್ಟಿಯಲ್ಲಿ ಮತ್ತೊರ್ವ ತೆಲುಗಿನ ನಟಿ ಆಶಿ ರಾಯ್ ಭಾಗಿ
- ನಾನು ಯಾವುದೇ ತಪ್ಪು ಮಾಡಿಲ್ಲ. ನೀವೆಲ್ಲ ನನ್ನ ಬೆಂಬಲಿಸಿ ಎಂದ ನಟಿ
- ನನಗೆ ಸಹಾಯ ಮಾಡಿ ಎಂದು ವಿಡಿಯೋ ಹಂಚಿಕೊಂಡ ಆಶಿ ರಾಯ್
ಬೆಂಗಳೂರಿನ ಫಾರಂ ಹೌಸ್ನಲ್ಲಿ ನಡೆದ ರೇವ್ ಪಾರ್ಟಿಯಲ್ಲಿ ತೆಲುಗು ನಟಿ ಹೇಮಾ ಭಾಗಿಯಾಗಿದ್ದರು. ಆದರೆ ತಾನು ಇರಲಿಲ್ಲ ಎಂದು ಹೇಮಾ ವಿಡಿಯೋ ಮೂಲಕ ಸಂದೇಶ ಹರಿಬಿಟ್ಟಿದ್ದರು. ಬಳಿಕ ಪೊಲೀಸರು ಹೇಮಾ ಪಾರ್ಟಿಯಲ್ಲಿ ಭಾಗಿಯಾಗಿದ್ದನ್ನು ಖಚಿತಪಡಿಸಿದ್ದರು. ಈಗಾಗಲೇ ಪಾರ್ಟಿ ಆಯೋಜಿಸಿದ್ದ ಐವರನ್ನು ಬಂಧಿಸಲಾಗಿದೆ. ಇದೀಗ ಬೆಂಗಳೂರಿನ ರೇವ್ ಪಾರ್ಟಿಯಲ್ಲಿ ಮತ್ತೊಬ್ಬ ನಟಿಯ ಹೆಸರು ಕೇಳಿ ಬಂದಿದೆ. ತೆಲುಗಿನ ನಟಿ ಆಶಿ ರಾಯ್ ತಾನು ಪಾರ್ಟಿಯಲ್ಲಿ ಇದ್ದೇ ಎಂದು ವಿಡಿಯೋ ಮೂಲಕ ಹೇಳಿಕೊಂಡಿದ್ದಾರೆ.
ರೇವ್ ಪಾರ್ಟಿಯಲ್ಲಿ ನಟಿ ಹೇಮಾ ಹೆಸರು ಕೇಳಿ ಬಂದಿತ್ತು. ಇದೀಗ ಈ ಪಾರ್ಟಿಯಲ್ಲಿ ಆಶಿ ರಾಯ್ ಇದ್ದರು ಎಂಬುದು ತಡವಾಗಿ ಬೆಳಕಿಗೆ ಬಂದಿದೆ. ಆಶಿ ರಾಯ್ ವಿಡಿಯೋದಲ್ಲಿ ಮಾತನಾಡಿ ಅದೊಂದು ಬರ್ತ್ಡೇ ಪಾರ್ಟಿಯಾಗಿತ್ತು. ಒಳಗೆ ಏನು ನಡೆತಿತ್ತು ಎಂದು ಗೊತ್ತಿರಲಿಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ. ದಯವಿಟ್ಟು ನೀವೆಲ್ಲ ನನ್ನ ಬೆಂಬಲಿಸಿ. ನಾನು ಕಷ್ಟಪಟ್ಟು ಉದ್ಯಮದಲ್ಲಿ ಬೆಳೆಯುತ್ತಿದ್ದೇನೆ. ದಯವಿಟ್ಟು ನನಗೆ ಸಹಾಯ ಮಾಡಿ ಎಂದು ವಿಡಿಯೋ ಹಂಚಿಕೊಂಡಿದ್ದಾರೆ.