- ರೇವ್ ಪಾರ್ಟಿ ಮೇಲೆ ದಾಳಿ ಮಾಡಿದ ಸಿಸಿಬಿ ಪೊಲೀಸರು
- ಮೂವರು ಡ್ರಗ್ ಪೆಡ್ಲರ್ಸ್ , ತೆಲುಗು ನಟಿ ಸೇರಿದಂತೆ ಐವರನ್ನ ವಶಕ್ಕೆ
- 17 ಎಂಡಿಎಂಎ ಮಾತ್ರೆ ಮತ್ತು ಕೊಕೇನ್ ಪೊಲೀಸರ ವಶಕ್ಕೆ
- ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಎಲೆಕ್ಟ್ರಾನಿಕ್ ಸಿಟಿಯಲ್ಲಿ ಜಿಆರ್ ಫಾರ್ಮ್ ಹೌಸ್ನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ ಮಾದಕ ವಸ್ತುಗಳನ್ನ ವಶಪಡಿಸಿಕೊಂಡಿದ್ದಾರೆ. ಜೊತೆಗೆ ಪಾರ್ಟಿ ಆಯೋಜಕ ವಾಸು ಹಾಗೂ ಮೂವರು ಡ್ರಗ್ ಪೆಡ್ಲರ್ಸ್ , ತೆಲುಗು ನಟಿ ಸೇರಿದಂತೆ ಐವರನ್ನ ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು ಮೂಲದ ಸುಮಾರು 100 ಕ್ಕೂ ಹೆಚ್ಚು ಜನ ಈ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಅವರಲ್ಲಿ ತೆಲುಗು ನಟಿ ಹೇಮಾ ಸೇರಿದಂತೆ ಕೆಲ ಬೇರೆ ನಟಿಯರು ಇದ್ದರು. ಪೊಲೀಸರು 17 ಎಂಡಿಎಂಎ ಮಾತ್ರೆ ಮತ್ತು ಕೊಕೇನ್ ಅಲ್ಲಿಂದ ವಶಪಡಿಸಿಕೊಂಡಿದ್ದಾರೆ. ಆಂಧ್ರದ ಶಾಸಕರೊಬ್ಬರ ಕಾರ್ ಪಾಸ್, ಕೂಡ ಪಾರ್ಟಿ ನಡೆಯುತ್ತಿದ್ದ ಸ್ಥಳದಲ್ಲಿ ಪತ್ತೆಯಾಗಿದೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸದ್ಯ ಸಿಸಿಬಿ ಪೋಲಿಸರು ಈ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ನಟಿ ಹೇಮಾ ಸೇರಿದಂತೆ ಬೇರೆ ಯಾವ ನಟಿಯರು ಪಾರ್ಟಿಯಲ್ಲಿ ಭಾಗಿಯಾಗಿದ್ರು ಅನ್ನೋದನ್ನ ತನಿಖೆಯ ನಂತ್ರ ಬಯಲಾಗಬೇಕಿದೆ.