ದರ್ಶನ್ ಮತ್ತು ಗ್ಯಾಂಗ್ನಿಂದ ರೇಣುಕಾಸ್ವಾಮಿ ಬರ್ಬರ ಹತ್ಯೆ ನಡೆದಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿ, ದರ್ಶನ್ ಜಾಮೀನು ಅರ್ಜಿಯ ಎರಡನೇ ದಿನದ ವಾದ ಮಂಡನೆ 57ನೇ ಸಿಸಿಹೆಚ್ ಕೋರ್ಟ್ನಲ್ಲಿ ಇಂದು ನಡೆದಿದೆ. ದರ್ಶನ್ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ವಾದ ಮಂಡನೆ ಮಾಡಿದ್ದಾರೆ. ನಕಲಿ ದಾಖಲೆ ಸೃಷ್ಟಿಸಲಾಗಿದೆ ಎಂದು ಶುಕ್ರವಾರ ಆರೋಪಿಸಿದ್ದರು.
ಇಂದು ಕೂಡ ವಾದ ಮುಂದುವರಿಸಿದ ಅವರು, ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆಯನ್ನು ತಡವಾಗಿ ಮಾಡಿಸಿದ್ದಾರೆ. ಮರಣೋತ್ತರ ಪರೀಕ್ಷೆಗೆ 3 ದಿನ ಕಾದಿದ್ದಾರೆ..ಯಾಕೆ.? ಪೊಲೀಸರು ಟೈಂ ವ್ಯರ್ಥ ಮಾಡಿದ್ದು ಯಾಕೆ.? ಹಾಗೂ ಪೊಲೀಸರ ಉದ್ದೇಶವಾದ್ರೂ ಏನು ಅಂತಾ ಗೊತ್ತಾಗಬೇಕು ಎಂದು ನ್ಯಾಯಾಲಯದಲ್ಲಿ ಸಿ.ವಿ.ನಾಗೇಶ್ ಪ್ರಬಲ ವಾದ ಮಂಡಿಸಿದ್ದಾರೆ. ಸಾಕ್ಷ್ಯಗಳ ಸೃಷ್ಟಿಗೆ ಒಂದು ಮಿತಿ ಇರಬೇಕು. ಆದರೆ ಈ ಕೇಸ್ ನಲ್ಲಿ ಪೊಲೀಸರು ಪ್ರತಿ ಹಂತದಲ್ಲೂ ಎಡವಿದ್ದಾರೆ ಎಂದು ಸಿ.ವಿ.ನಾಗೇಶ್ ವಾದಿಸಿದ್ದಾರೆ.