- ಅನ್ನಪೂರ್ಣೇಶ್ವರಿ ನಗರ ಠಾಣಾ ಸುತ್ತ ಮುತ್ತ ನಿಷೇದಾಜ್ಞೆ ಜಾರಿ
- ಪೊಲೀಸ್ ಠಾಣೆಯ ಸುತ್ತ ಶಾಮೀಯಾನ ಹಾಕಿರೋ ಪೊಲೀಸರು
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ನಟ ದರ್ಶನ್, ಪವಿತ್ರಾ ಗೌಡ ಮತ್ತು ಅವರ ಗ್ಯಾಂಗ್ ಬಂಧಿಸಿದ್ದಾರೆ. ಆರೋಪಿಗಳ ವಿಚಾರಣೆಗೆ ಅನ್ನಪೂರ್ಣೇಶ್ವರಿ ನಗರ ಠಾಣಾ ಸುತ್ತ ಮುತ್ತ ನಿಷೇದಾಜ್ಞೆ ಜಾರಿ ಮಾಡಿ ಆದೇಶಿಸಿದೆ. ದರ್ಶನ್ ಅರೆಸ್ಟ್ ಹಿನ್ನೆಲೆ ಠಾಣೆ ಬಳಿ ನಿನ್ನೆ, ಮೊನ್ನೆ ಸಾಕಷ್ಟು ಜನ ಅಭಿಮಾನಿಗಳು ಸೇರ್ತಿದ್ರು. ಲಾಠಿ ಚಾರ್ಜ್ ಮಾಡುವಷ್ಟು ಜನ ಸೇರಿದ್ರು. ಹೀಗಾಗಿ ಕೊಲೆ ಆರೋಪಿಗಳ ವಿಚಾರಣೆಗೆ 144 ಸೆಕ್ಷನ್ ಜಾರಿ ಮಾಡಿದ್ದು, ಈ ಹಿನ್ನೆಲೆ ಪೊಲೀಸ್ ಠಾಣೆ ಪೂರ್ತಿ ಶಾಮಿಯಾನದಿಂದ ಪೊಲೀಸರು ಮುಚ್ಚಿದ್ದಾರೆ.
ಕೊಲೆ ಆರೋಪಿಗಳ ವಿಚಾರಣೆಗಾಗಿ ಪೋಲೀಸ್ ಠಾಣೆಯ ಸುತ್ತ ಶಾಮಿಯಾನ ಹಾಕಿದ ಬೆನ್ನಲ್ಲೆ ದರ್ಶನ್ ಅವರನ್ನು ಪೊಲೀಸರು ರಕ್ಷಣೆ ಮಾಡ್ತಿದ್ದಾರಾ ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಠಾಣೆಯ ಒಳಗೆ ಸಾರ್ವಜನಿಕರಿಗೂ ಎಂಟ್ರಿ ಇಲ್ಲದಂತೆ ಗೇಟ್ ಕ್ಲೋಸ್ ಮಾಡಿದ್ದಾರೆ. ಸಣ್ಣಪುಟ್ಟ ಕೇಸ್ಗಳು ಅಂತ ಬಂದಿರೊರನ್ನ ಪೊಲೀಸರು ವಾಪಸ್ ಕಳಿಸ್ತಿದ್ದಾರೆ. ಸದ್ಯ ಠಾಣಾ ಸುತ್ತಮುತ್ತ 200 ಮೀಟರ್ 144 ಸೆಕ್ಷನ್ ಜಾರಿ ಮಾಡಿ ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಆದೇಶ ಹೊರಡಿಸಿದ್ದಾರೆ.