ಬೆಂಗಳೂರು: ಇತಿಹಾಸ ಪ್ರಸಿದ್ಧ ಅಯೋಧ್ಯೆಯಲ್ಲಿ ಆಕರ್ಷಕ ಬಾಲರಾಮನ ಮೂರ್ತಿ ಕೆತ್ತುವ ಮೂಲಕ ದೇಶದ ಮನೆಮಾತಾಗಿದ್ದ, ಮೈಸೂರಿನ ಶ್ರೇಷ್ಠ ಶಿಲ್ಪಿ ಅರುಣ್ ಯೋಗಿರಾಜ್ ಮತ್ತೊಂದು ದೊಡ್ಡ ಆಫರ್ ಪಡೆದುಕೊಂಡಿದ್ದಾರೆ. ಬಾಲರಾಮನ ಮೂರ್ತಿ ಕೆತ್ತಿ ವಿಶ್ವಪ್ರಸಿದ್ಧರಾದ ಅರುಣ್ ಯೋಗಿರಾಜ್ ಈಗ ಹಿಂದೂ ಹೃದಯ ಸಾಮ್ರಾಟ ಛತ್ರಪತಿ ಶಿವಾಜಿ ಮಹಾರಾಜರ ಕಲ್ಲಿನ ಮೂರ್ತಿಯನ್ನು ಕೆತ್ತುವ ಆಫರ್ ಪಡೆದುಕೊಂಡಿದ್ದಾರೆ. ಬಗ್ಗೆ ಸ್ವತಃ ಅವರೇ ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಮಹಾರಾಷ್ಟ್ರದ ಥಾಣೆಯಲ್ಲಿ ಶಿವಾಜಿ ಮಹಾರಾಜರ ಅದ್ಭುತ ದೇವಸ್ಥಾನ ನಿರ್ಮಾಣವಾಗುತ್ತಿದೆ. ಇದರಲ್ಲಿ ಪ್ರತಿಷ್ಠಾಪನೆ ಮಾಡಲಾಗುವ ಶಿವಾಜಿ ಮಹಾರಾಜನ ಕಲ್ಲಿನ ಮೂರ್ತಿಯನ್ನು ಅರುಣ್ ಯೋಗಿರಾಜ್ ಕೆತ್ತಲಿದ್ದಾರೆ.
ಇದನ್ನು ಓದಿ:ಬಿಗ್ಬಾಸ್ ಶೋ ನಿಷೇಧಕ್ಕೆ ಒತ್ತಾಯ..ಕನ್ನಡಿಗರಿಗೆ ಹೆಚ್ಚಿದ ಆತಂಕ!
‘ಮಹಾರಾಷ್ಟ್ರದ ಥಾಣೆಯಲ್ಲಿ ಸುಂದರವಾದ ದೇವಾಲಯಕ್ಕಾಗಿ ಶಿವಾಜಿ ಮಹಾರಾಜರ ಶಿಲಾವಿಗ್ರಹವನ್ನು ಕೆತ್ತಿಸುವ ಅವಕಾಶ ಸಿಕ್ಕಿದೆ’ ಎಂದು ಅವರು ಬರೆದುಕೊಂಡಿದ್ದಾರೆ. ಅದರೊಂದಿಗೆ ಶಿವಾಜಿ ಮಹಾರಾಜರ ತಾವು ಕೆತ್ತಿದ ಮೂರ್ತಿಯ ಜೊತೆಗಿನ ಫೋಟೋವೊಂದನ್ನು ಕೂಡ ಅವರು ಹಂಚಿಕೊಂಡಿದ್ದಾರೆ. ಅದರೊಂದಿಗೆ ಥಾಣೆಯ ದೇವಾಲಯದ ಚಿತ್ರವನ್ನೂ ಹಂಚಿಕೊಂಡಿದ್ದಾರೆ.