ಬೆಂಗಳೂರು; ಪರಮ ಪೂಜ್ಯ ಶ್ರೀ ಶಿವಕೃಪಾನಂದ ಸ್ವಾಮೀಜಿ ಅವರು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ದಕ್ಷಿಣ ಮೂರ್ತಿ ನಂದಿ ತೀರ್ಥಕ್ಕೆ ಭೇಟಿ ನೀಡಿದರು. ನಂತರ ಕಾಡುಮಲ್ಲೇಶ್ವರದ ದೇವಾಲಯಕಕೂ ಭೇಟಿ ನೀಡಿದರು. ಈ ವೇಳೆ ಕುಂಕುಮಾರ್ಚನೆ ಪೂಜೆಯನ್ನು ನಡೆಸಲಾಯಿತು.
ಶ್ರೀ ಶಿವಕೃಪಾನಂದಾ ಸ್ವಾಮಿಗಳು ಆಗಮಿಸುತ್ತಿದ್ದಂತೆ ಒಂದು ಕಡೆ ನಾದ ಸ್ವರ ಮೊಳಗುತ್ತಿತ್ತು. ಮತ್ತೊಂದು ಕಡೆ ಪೂರ್ಣ ಕುಂಭ ಸ್ವಾಗತದೊಂದಿಗೆ ಸ್ವಾಮೀಜಿ ಅವರನ್ನು ಬರಮಾಡಿಕೊಳ್ಳಲಾಯಿತು. ದೇವಾಲಯ ದರ್ಶನದ ಬಳಿಕ ಗುರುಗಳು ಹರ್ಷ ವ್ಯಕ್ತಪಡಿಸಿದರು.
ಇದೇ ವೇಳೆ ಪರಮ ಪೂಜ್ಯ ಗುರಮಾ ಅವರು ಕೂಡ ಗುರೂಜಿಗಳೊಂದಿಗೆ ಆಗಮಿಸಿ ದೇವರ ದರ್ಶನ ಪಡೆದುಕೊಂಡರು. ದೇವಾಲಯ ಸಮೀಪದಲ್ಲಿದ್ದ ಸಸ್ಯ ರಾಶಿಯನ್ನು ಗುರುಮಾ ಅವರು ಗಮನಿಸಿದರು. ನಿವೃತ್ತ ಹಿರಿಯ ಪೋಲಿಸ್ ಅಧಿಕಾರಿ ಬಿಕೆ ಶಿವರಾಂ ಅವರು ಅಲ್ಲಿ ರುದ್ರಾಕ್ಷಿ ನಾಗಪುಷ್ಪ ಗಿಡಗಳು ಸೇರಿದಂತೆ ಹಲವು ಸಸಿಗಳನ್ನು ನೆಡಲಾಗಿದೆ ಎಂದು ತಿಳಿಸಿದರು.
ದೇವಾಲಯದ ಪ್ರಮುಖ ಪುರೋಹಿತರಾದ ಗಂಗಾಧರ್, ಶರತ್ ಮತ್ತು ವೆಂಕಟೇಶ್ ಪೂಜಾಕೈಂಕರ್ಯ ನೆರವೇರಿಸಿದರು. ಡಾ. ಮಲ್ಲಿಕಾರ್ಜುನ್, ಡಾ. ಸುಧೀಂದ್ರ ಹಾಗೂ ಈ ಭಾಗದ ಪ್ರಮುಖರಾದ ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಬಿಕೆ ಶಿವರಾಂ ಅವರು ಸೇರಿದಂತೆ ಹಲವು ಪ್ರಮುಖರು ಈ ವೇಳೆ ಗುರುಗಳನ್ನು ಬರಮಾಡಿಕೊಂಡರು.