ಪರಮ ಪೂಜ್ಯ ಶ್ರೀ ಶಿವಕೃಪಾನಂದ ಸ್ವಾಮೀಜಿ ಅವರು ನಗರದ ದೊಡ್ಡಜಾಲ ಬಳಿ ಇರೋ ಕೇಂದ್ರ ಕೈಗಾರಿಕಾ ರಕ್ಷಣಾ ಪಡೆಯ ( CISF) ಸಿಬ್ಬಂದಿಗೆ ಹಿಮಾಲಯದ ಧ್ಯಾನ ಶಿಬಿರವನ್ನ ನಡೆಸಿದರು. ಈ ಸಂದರ್ಭದಲ್ಲಿ ಧ್ಯಾನ ಸಂದೇಶ, ದೇಶದ ಸಂಸ್ಕೃತಿಯ ಸಾರವನ್ನ ಸಾರಿದರು.
ಧ್ಯಾನದಿಂದ ಸಕಲ ಪ್ರಗತಿಯೂ ಸಾಧ್ಯ ಎಂದ ಗುರೂಜೀ, ಎಂತಹ ಒತ್ತಡದ ಪರಿಸ್ಥಿತಿಯನ್ನು ಎದುರಿಸುವ ಶಕ್ತಿ ಧ್ಯಾನಕ್ಕಿದೆ ಎಂದರು.
ಧ್ಯಾನ ಬದುಕಿನಲ್ಲಿ ಬೆಳಕು ತರಬಲ್ಲದು. ನಿಯಮಿತವಾಗಿ ಧ್ಯಾನ ಮಾಡುವುದರಿಂದಾಗುವ ಲಾಭ ಮತ್ತು ಪ್ರಯೋಜನಗಳ ಬಗ್ಗೆ ಶ್ರೀಗಳು ಮನವರಿಕೆ ಮಾಡಿಕೊಟ್ಟರು. ಬಳಿಕ ಧ್ಯಾನದ ಬಗ್ಗೆ ಇರುವ ಸಂಶಯಗಳ ಬಗೆಗೆ ರಕ್ಷಣಾ ಪಡೆಯ ಸಿಬ್ಬಂದಿ ಶ್ರೀಗಳಿಗೆ ಪ್ರಶ್ನೆ ಕೇಳಿ ಉತ್ತರ ಪಡೆದರು.. ಈ ಶಿಬಿರದಲ್ಲಿ ಡೆಪ್ಯೂಟಿ ಕಮಾಂಡೆಂಟ್ ಪಿಎಸ್ ರಾಥೋರ್ ಇನ್ಸ್ಪೆಕ್ಟರ್ ಕೈಲಾಶ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದೇ ವೇಳೆ ಪರಮಪೂಜ್ಯ ಶ್ರೀ ಶಿವಕೃಪಾನಂದ ಸ್ವಾಮೀಜಿ ಅವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.