- ಬೆಂಗಳೂರಿನಲ್ಲಿ ಧಾರಕಾರ ಮಳೆ
- ಮಳೆಯಿಂದಾಗಿ ಶೂಗಳಲ್ಲಿ, ಗಾಡಿಗಳಲ್ಲಿ ಅಡಗಿದ್ದ ಹಾವುಗಳು
ಬೆಂಗಳೂರಿಗರಿಗೆ ಒಂದಾದ ಮೇಲೆ ಒಂದು ಭೀತಿ… ಮೊದಲು ಬೇಸಿಗೆಯ ಧಗೆಗೆ ತತ್ತರಿಸಿದ ಬೆಂಗಳೂರು ಜನ ಸಾಕಪ್ಪ ಸಾಕು ಅಂದಿದ್ದರು. ಮಳೆಗಾಗಿ ಕಾದು ಕುಳಿತ ಜನಸಾಮಾನ್ಯರು ಇಷ್ಟೊಂದು ಮಳೆಯಿಂದ ಹಲವಾರು ತೊಂದರೆಗಳಿಗೆ ಸಿಲುಕಿ ಕೊಂಡಿದ್ದಾರೆ. ನಿನ್ನೆ ರಾಜಧಾನಿಯಲ್ಲಿ 110 mm ಮಳೆಯಾಗಿದ್ದು ರಸ್ತೆಯಲ್ಲಿ ನೀರು ನಿಂತು ಬಿಟ್ಟಿತು. ಎಲೆಂದರಲ್ಲಿ ಮರಗಳು ಉರುಳಿದವು. ಇದರಿಂದ ಬೆಂಗಳೂರುನಲ್ಲಿ ಜನ ತಬ್ಬಿಬಾದರು.
ಮಳೆಗಾಲ ಶುರುವಾಗಿದೆ ಇದರಿಂದ ಎಲ್ಲರೂ ಬೆಚ್ಚಗಿರಲು ಬಯಸುತ್ತಾರೆ. ಮನುಷ್ಯರಂತೆಯೇ ಪ್ರಾಣಿಗಳು ಸಹ ಬೆಚ್ಚಗಿರಲು ಇಷ್ಟ ಪಡುತ್ತವೆ. ಮಳೆಗಾಲ ಶುರುವಾದ್ರೆ ಹಾವುಗಳ ಹೊರ ಬಂದು ಶೂಗಳಲ್ಲಿ, ಗಾಡಿಗಳಲ್ಲಿ, ಮನೆಯ ಬಾಗಿಲಿನ ಸೊಂದ್ದಿಗಳಲ್ಲಿ ಹೀಗೆ ಅನೇಕ ಜಾಗಗಳಲ್ಲಿ ಅಡಗಿರುತ್ತವೆ. ಈಗಾಗಲೇ ಬೊಮ್ಮನಹಳ್ಳಿ, ದಾಸರಹಳ್ಳಿ, ಯೆಲಹಂಕ ಸೇರಿ ಕೆಲವು ಹಳ್ಳಿಗಳಲ್ಲಿ ಬಿಬಿಎಂಪಿ ಗೆ ಕರೆಗಳು ಬಂದಿವೆ. ದಿನಕ್ಕೆ 30 ಕರೆಗಳು ಬರುವುದಾಗಿ BBMP ತಿಳಿಸಿದ್ದಾರೆ. ಹಾವುಗಳನ್ನ ಕಂಡ ತಕ್ಷಣ ಗಾಭರಿ ಪಡದೆ ವನ್ಯ ಜೀವಿ ಸಂರಕ್ಷಣೆಗೆ ಕರೆ ಮಾಡಿ.
ಚಿಂತೆ ಬೇಡ ಹಾವು ಬಂದ್ರೆ ಈ ನಂಬರ್ಗೆ ಕರೆ ಮಾಡಿ
BBMP ವನ್ಯಜೀವಿ ಸಹಾಯವಾಣಿ: 1533
ಕರ್ನಾಟಕ ಅರಣ್ಯ ಇಲಾಖೆ ಸಹಾಯವಾಣಿ: 1926
BBMP ವನ್ಯ ಜೀವಿ ಸಂರಕ್ಷಣಾ ಸಹಾಯವಾಣಿ: 9902794711