- ಬೆಂಗಳೂರಿನಲ್ಲಿ ತಂಪು ಪಾನೀಯ ಕುಡಿದು ಮಗು ಅಸ್ವಸ್ಥ
- ತಂಪು ಪಾನೀಯ ಪ್ಯಾಕೆಟ್ನಲ್ಲಿ ಕಪ್ಪು ಬಣ್ಣ ಮಿಶ್ರಿಣ ವಸ್ತು ಪತ್ತೆ
ಬೆಂಗಳೂರಿನಲ್ಲಿ ತಂಪು ಪಾನೀಯ ಕುಡಿದು ಮಗು ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ. ಶ್ರೀರಾಂಪುರದಲ್ಲಿ ಮಗುವೊಂದು ಪ್ಯಾಕೆಟ್ ಜ್ಯೂಸ್ ಕುಡಿದು ಅಸ್ವಸ್ಥಗೊಂಡಿದೆ. ಪೋಷಕರು ಪರಶೀಲಿಸಿದ್ದು, ತಂಪು ಪಾನೀಯ ಪ್ಯಾಕೆಟ್ನಲ್ಲಿ ಕಪ್ಪು ಬಣ್ಣ ಮಿಶ್ರಿಣ ವಸ್ತುವೊಂದು ಸಿಕ್ಕಿದೆ. ಘಟನೆ ಸಂಬಂಧದ ವಿಡಿಯೋ ವೈರಲ್ ಆಗಿದೆ.
ತಂಪು ಪಾನೀಯ ಪ್ಯಾಕೆಟ್ನಲ್ಲಿ ಸಿಕ್ಕ ಕಪ್ಪು ಬಣ್ಣದ ಮಿಶ್ರಣದಿಂದ ಮಗು ಅಸ್ವಸ್ಥವಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮಗು ಚೇತರಿಸಿಕೊಂಡಿದೆ. ಘಟನೆ ಸಂಬಂಧ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತಂಪು ಪಾನೀಯ ಗುಣಮಟ್ಟ ಪರೀಕ್ಷೆಗೆ ಫುಟ್ ಡಿಪಾರ್ಟ್ಮೆಂಟ್ಗೆ ರವಾನಿಸಲಾಗಿದೆ.