ಬೆಂಗಳೂರು: ಜೈಲಿನಲ್ಲಿದ್ದ ಅಪರಾಧಿಗಳನ್ನು ಹೆಚ್ಚಾಗಿ ಮದುವೆ, ಅನಾರೋಗ್ಯಕ್ಕೆ ಚಿಕಿತ್ಸೆ, ಮತ್ತು ಏಮರ್ಜೆನ್ಸಿ ಅಂತಹ ವಿಚಾರಗಳಿಗೆ ಅಪರಾಧಿಯ ಕುಟುಂಬದವರು ಪೆರೋಲ್ ನೀಡಿ ಎಂದು ಕೋರುವುದು ಕಾಮನ್ ಆಗಿದೆ. ಆದರೆ ಇಲ್ಲೋಂದು ಅಪರೂಪದ ಕೇಸ್ ಅಲ್ಲಿ ಸಂತಾನ ಪಡೆಯುವ ಸಲುವಾಗಿ ಕೊಲೆ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿರುವ ತನ್ನ ಪತಿಯನ್ನು ಪೆರೋಲ್ ಮೇಲೆ ಜೈಲಿನಿಂದ ಬಿಡುಗಡೆಗೊಳಿಸುವಂತೆ ಜೈಲು ಅಧಿಕಾರಿಗಳಿಗೆ ನಿರ್ದೇಶಿಸಬೇಕು ಎಂದು ಕೋರಿ ಪತ್ನಿಯೊಬ್ಬರು ಹೈಕೋರ್ಟ್ ಮೊರೆ ಹೋಗಿದ್ದಾರೆ.
ಆದರೆ ಈ ಕಥೆಯ ಟ್ವಿಸ್ಟ್ ಏನಂದರೆ ಇದೆ ಮಹಿಳೆ ಈ ಹಿಂದೆ ಜೈಲಿನಿಂದ ಪೆರೋಲ್ ಮೇಲೆ ತನ್ನ ಪತಿಯನ್ನು ಬಿಡುಗಡೆ ಮಾಡಿಸಿಕೊಂಡು ಬಂದು ಮದುವೆಯಾಗಿದ್ದರು. ಇದೀಗ ಸಂತಾನ ಪಡೆಯಲು ಪತಿಗೆ 90 ದಿನಗಳ ಕಾಲ ಪೆರೋಲ್ ನೀಡಲು ಪರಪ್ಪನ ಅಗ್ರಹಾರ ಜೈಲು ಅಧೀಕ್ಷಕರಿಗೆ ನಿರ್ದೇಶಿಸಲು ಕೋರಿ ಹೈಕೋರ್ಟ್ಗೆ ಮನವಿ ಮಾಡಿದ್ದಾರೆ. ಈ ಹಿನ್ನೆಲೆ ಆಕೆಯ ಅರ್ಜಿಯನ್ನಾ ಸೋಮವಾರವೇ ಜೂ.3 ಹೈಕೋರ್ಟ್ನಲ್ಲಿ ವಿಚಾರಣೆಗೆ ನಿಗದಿಯಾಗಿದೆ.
ಏನಿದು ಕೊಲೆ ಪ್ರಕರಣ:
ಕೊಲೆ ಪ್ರಕರಣದಲ್ಲಿ ಕೋಲಾರದ ಆನಂದ್ಗೆ ಜೀವಾವಧಿಶಿಕ್ಷೆ ವಿಧಿಸಿ 2019ರಲ್ಲಿ ಕೋಲಾರದ ಎರಡನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಆನಂದ್ ಹೈಕೋರ್ಟ್ಗೆ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ಜೀವಾವಧಿ ಶಿಕ್ಷೆಯನ್ನು 10 ವರ್ಷಕ್ಕೆ ಇಳಿಸಿ 2023ರಲ್ಲಿ ತೀರ್ಪು ನೀಡಿತ್ತು.
ಜೈಲಿನಲ್ಲಿರುವ ಖೈದಿಯ ಲವ್ ಕಹಾನಿ:
ಕೊಲೆ ಕೇಸ್ಕ್ಕಿಂತ ಮೊದಲು ಆನಂದ್ ಮತ್ತು ಅವನ ಪತ್ನಿ ಒಬ್ಬರನ್ನಾ ಒಬ್ಬರು ತುಂಬಾ ಲವ್ ಮಾಡಿದ್ದರು. ನನ್ನ ಲವರ್ ಒಬ್ಬ ಕೊಲೆಗೆಡುಕ ಅಂತಾ ಗೊತ್ತಿದ್ದರು ಮಹಿಳೆಯ ಪ್ರೀತಿ ಕಿಂಚಿತ್ತು ಕಡಿಮೆ ಆಗಿರಲಿಲ್ಲ. ಆದರೆ ಆಕೆಯ ಕುಟುಂಸ್ಥರು ಅವನೊಬ್ಬ ಕೊಲೆಗಾರ ಅವನನ್ನಾ ಬಿಟ್ಟು ಬೇರೆ ಮದುವೆ ಆಗು ಅಂದರು ಸಹಿತ ಆಕೆ ಕ್ಯಾರೆ ಎನ್ನಲಿಲ್ಲ. ಈ ಕಾರಣಕ್ಕೆ ಯುವತಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿ, ಮದುವೆಯಾಗಲು ಆನಂದ್ನನ್ನು ಪೆರೋಲ್ ಮೇಲೆ ಬಿಡುಗಡೆಗೊಳಿಸುವಂತೆ ಮನವಿ ಸಲ್ಲಿಸಿದ್ದರು. ಅರ್ಜಿ ಪುರಸ್ಕರಿಸಿದ್ದ ಹೈಕೋರ್ಟ್, ಅರ್ಜಿದಾರೆ ಯುವತಿಯನ್ನು ಮದುವೆಯಾಗಲು ಆನಂದ್ನನ್ನು 2023ರ ಮಾ.31ರಿಂದ ಏ.20ರವರೆಗೆ ಪೆರೋಲ್ ಮೇಲೆ ಬಿಡುಗಡೆಗೊಳಿಸಲು ಜೈಲು ಅಧಿಕಾರಿಗಳಿಗೆ 2023ರ ಮಾ.31ರಂದು ಆದೇಶಿಸಿತ್ತು.
ಅದರಂತೆ ಏ.11ರಂದು ಮದುವೆಯಾಗಿದ್ದ ಆನಂದ್ ಮತ್ತು ಯುವತಿ, ವಿವಾಹ ನೋಂದಣಿ ಪತ್ರವನ್ನು ಹೈಕೋರ್ಟ್ಗೆ ಸಲ್ಲಿಸಿದ್ದರು. ಆ ಬಳಿಕ ವೈವಾಹಿಕ ಜೀವನ ನಡೆಸಲು ಪೆರೋಲ್ ಅನ್ನು 60 ದಿನ ವಿಸ್ತರಿಸುವಂತೆ ಕೋರಿದ್ದರು. ಅದಕ್ಕೂ ಸಮ್ಮತಿಸಿದ್ದ ಹೈಕೋರ್ಟ್, ಪೆರೋಲ್ ಅವಧಿ ವಿಸ್ತರಿಸಿತ್ತು. ಪೆರೋಲ್ ಅವಧಿ ಪೂರ್ಣಗೊಂಡ ಕೂಡಲೇ ಪತ್ನಿಯನ್ನು ತಾಯಿ ಬಳಿ ಬಿಟ್ಟಿದ್ದ ಆನಂದ್, ಕಾರಾಗೃಹಕ್ಕೆ ಹಿಂದಿರುಗಿದ್ದ. ಆತ ಸದ್ಯ ನ್ಯಾಯಾಂಗ ಬಂಧನದಲ್ಲಿ ಇದ್ದು, ಆರು ವರ್ಷ ಜೈಲು ಶಿಕ್ಷೆ ಪೂರೈಸಿದ್ದಾರೆ. ಇನ್ನೂ ಅಂದಾಜು ನಾಲ್ಕು ವರ್ಷ ಜೈಲು ಶಿಕ್ಷೆ ಪೂರೈಸಬೇಕಿದೆ.
ಸಂತಾನಕ್ಕಾಗಿ ಪೆರೋಲ್ ಕೋರಿಕೆ:
ಇದೀಗ ಮತ್ತೆ ಕೋರ್ಟ್ ಮೊರೆ ಹೋದ ಆಕೆ 90 ದಿನಗಳ ಕಾಲ ಗಂಡನನ್ನು ಪೆರೋಲ್ ಮೇಲೆ ಬಿಡುಗಡೆ ಮಾಡಲು 2024ರ ಏ.18ರಂದು ಜೈಲು ಅಧಿಕಾರಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಇನ್ನುವರೆಗೂ ಕೋರಕೆಯನ್ನಾ ಪತ್ರ ಪರಿಗಣಿಸಿಲ್ಲ. ಕೋರಿಕೆ ಪತ್ರ ಪರಿಗಣಿಸುವಂತೆ ಪರಪ್ಪನ ಅಗ್ರಹಾರ ಜೈಲು ಮುಖ್ಯ ಅಧೀಕ್ಷಕರಿಗೆ ನಿರ್ದೇಶಿಸಬೇಕು ಎಂದು ಕೋರಿದ್ದಾರೆ. ಆನಂದ್ ಪತ್ನಿ ಪರ ವಕೀಲ ಡಿ.ಮೋಹನ್ ಕುಮಾರ್ ವಾದ ಮಂಡಿಸಲಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಮಹಿಳೆ, ವೈವಾಹಿಕ ಜೀವನದಿಂದ ಸಂತಾನ ಪಡೆಯುವುದು ನನ್ನ ಹಕ್ಕು. ಸಂತಾನ ಪಡೆದರೆ ಸಜಾಬಂಧಿ ತನ್ನ ನಡವಳಿಕೆ ತಿದ್ದುಕೊಳ್ಳಲು ನೆರವಾಗುತ್ತದೆ. ಶಿಕ್ಷಾವಧಿ ಪೂರೈಸಿ ಸಮಾಜದ ಮುಖ್ಯವಾಹಿಣಿಗೆ ವಾಪಸ್ಸಾದ ನಂತರ ಸಜಾಬಂಧಿಯು ಶಾಂತಿ-ನಮ್ಮದಿಯಿಂದ ಜೀವನ ನಡೆಸಲು ಅನುಕೂಲವಾಗುತ್ತದೆ ಎಂಬ ಉದ್ದೇಶದಿಂದ ಪೆರೋಲ್ ಸೌಲಭ್ಯ ಕಲ್ಪಿಸಲಾಗಿದೆ. ಆನಂದ್ ಜೈಲಿನಲ್ಲಿ ಇರುವುದರಿಂದ ಸಂತಾನ ಪಡೆಯುವ ಹಕ್ಕಿನಿಂದ ನಾನು ವಂಚಿತಳಾಗುತ್ತಿದ್ದೇನೆ. ಸಜಾಬಂಧಿ ಮೂಲಭೂತ ಹಕ್ಕುಗಳನ್ನು ಸಹ ರಕ್ಷಣೆ ಮಾಡಬೇಕಿದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಆದ್ದರಿಂದ ಆನಂದ್ ಅವರನ್ನು 90 ದಿನ ಕಾಲ ಪೆರೋಲ್ ಮೇಲೆ ಬಿಡುಗಡೆ ಮಾಡಲು ಜೈಲು ಅಧೀಕ್ಷಕರಿಗೆ ನಿರ್ದೇಶಿಸಬೇಕು’ ಎಂದು ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ