ಉಬರ್ ಸಂಸ್ಥೆಯು ಮಹಿಳಾ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ್ದು, ಉಬರ್ ಮೋಟೋ ವುಮೆನ್ ಸೇವೆಯನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಬೈಕ್ ಟ್ಯಾಕ್ಸಿಗಳನ್ನು ಮಹಿಳೆಯರೇ ನಿರ್ವಹಿಸುವ ಮೊದಲ ಮಾದರಿಯ ಸೇವೆಯಾಗಿದೆ. ಮಹಿಳೆಯರಿಗೆ ಮಾತ್ರ ಈ ಸೇವೆಯನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಇನ್ನು ಮೇಲೆ ಮಹಿಳಾ ಡ್ರೈವರ್ಸ್ ಗಳನ್ನು ರೈಡಿಂಗ್ ಕೆಲಸಕ್ಕೆ ತೆಗೆದುಕೊಳ್ಳುತ್ತಿದ್ದು, ಮಹಿಳಾ ಪ್ರಯಾಣಿಕರು ಆರಾಮಾಗಿ ಯಾವುದೇ ಮುಜುಗರದ ಚಿಂತೆಯಿಲ್ಲದೇ ಸಂಚಾರ ಮಾಡಬಹುದು ಎಂದು ತಿಳಿಸಿದೆ. ಈ ಮೂಲಕ ಮಹಿಳೆಯರಿಗೆ ಉದ್ಯೋಗಗಳನ್ನು ಕಲ್ಪಿಸುವ ಯೋಜನೆ ಇದ್ದು, ಕೇವಲ ಪ್ರಯಾಣಿಕರಿಗೆ ಭದ್ರತೆ ಅಲ್ಲದೇ ರೈಡಿಂಗ್ ಮಹಿಳೆಯರಿಗೂ ಭದ್ರತೆ ಒದಗಿಸುತ್ತಿದೆ. ಫೋನ್ ಸಂಖ್ಯೆಗಳು ಮತ್ತು ಡ್ರಾಪ್-ಆಫ್ ಸ್ಥಳಗಳ ರಹಸ್ಯ ಕಾಪಾಡಲೂ ಅವಕಾಶವಿದೆ. ಇದರಲ್ಲಿ ಹೊಸ ಹೊಸ ಭದ್ರತಾ ವೈಶಿಷ್ಟ್ಯಗಳು ಕೂಡಾ ಇದ್ದು, ಇದಕ್ಕೆ ‘ಮೋಟೋ ವುಮೆನ್’ ಸೇವೆ ಎಂದು ಹೆಸರಿಟ್ಟಿದ್ದಾರೆ. ಈ ಯೋಜನೆಯ ಮೂಲಕ ಚಾಲಕಿಯರು ರೈಡರ್ಸ್ ಆಗಿ ಬರಲಿದ್ದಾರೆ. ಈ ಸೇವೆಗೆ ಆಗಲೇ 300 ಕ್ಕೂ ಹೆಚ್ಚು ಮಹಿಳೆಯರು ಸೇರಲು ನೋಂದಾಯಿಸಿಕೊಂಡಿದ್ದಾರೆ ಎಂದು ಉಬರ್ ಸಂಸ್ಥೆ ತಿಳಿಸಿದೆ.