ವಾಲ್ಮೀಕಿ ನಿಗಮದಲ್ಲಿ ಹಗರಣ ನಡೆದಿದೆ ಆದರೆ ಹಗರಣಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ ಎಂದು ಬ್ಯಾಂಕ್ ಅಧಿಕಾರಿಗಳತ್ತ ಮೇಲೆ ಸಿಎಂ ಸಿದ್ದರಾಮಯ್ಯ ಕೈತೋರಿದ್ದಾರೆ. ವಿಧಾನಸೌಧದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಾನು ವಾಕ್ಮೀಕಿ ಅಭಿವೃದ್ಧಿ ಇಲಾಖೆಯ ಸಚಿವನಾಗಿದ್ದೇನೆ. ನಾಗೇಂದ್ರ ರಾಜೀನಾಮೆ ಕೊಟ್ಟ ಬಳಿಕ ನಾನೇ ಇಟ್ಟುಕೊಂಡಿದ್ದೇನೆ. ವಾಲ್ಮೀಕಿ ನಿಗಮದಲ್ಲಿ ಅಕ್ರಮ ಆಗಿಲ್ಲ ಎಂದು ಹೇಳುತ್ತಿಲ್ಲ. ಅಕ್ರಮ ಆಗಿದೆ ಅಂತಲೇ ನಾವೂ ಹೇಳುತ್ತಿರುವುದು. ಅಕ್ರಮ ಮಾಡಿರುವವರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ನಾವು ಬಸನಗೌಡ ದದ್ದಲ್ ನ ವಾಲ್ಮೀಕಿ ನಿಗಮದ ಅಧ್ಯಕ್ಷನಾಗಿ ಮಾಡಿದ್ದೇವೆ. ಯೂನಿಯನ್ ಬ್ಯಾಂಕ್ ನಲ್ಲಿ ಶೋಭನಾ ಎನ್ನುವರು ಎಂಡಿ ಇದ್ದಾರೆ. ಅದೇ ಬ್ಯಾಂಕ್ ಎಂಜಿ ರಸ್ತೆಯಲ್ಲಿದೆ. ಯೂನಿಯನ್ ಬ್ಯಾಂಕ್ ಕೇಂದ್ರ ಸರ್ಕಾರದ ಅಧೀನದಲ್ಲಿ ಬರುತ್ತೆ. ವಸಂತನಗರದ ಬ್ಯಾಂಕ್ ನಿಂದ ಎಂಜಿ ರಸ್ತೆಯ ಯೂನಿಯನ್ ಬ್ಯಾಂಕ್ ಗೆ ವರ್ಗಾವಣೆ ಮಾಡಿದ್ದಾರೆ. ವಾಲ್ಮೀಕಿ ನಿಗಮದ ಹಣ ವಸಂತನಗರ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಇಡುತ್ತಿದ್ದರು. ಸಾಮಾನ್ಯವಾಗಿ ಹಣಕಾಸು ವ್ಯವಹಾರ ನಿಭಾಯಿಸುವರು. ಡ್ರಾಯಿಂಗ್ ಅಂಡ್ ಡಿಸ್ಪರ್ಸಿಂಗ್ ಅಧಿಕಾರಿಯ ಜವಾಬ್ದಾರಿ. ಹೆಚ್ಚು ಜವಾಬ್ದಾರಿ ನಿಗಮದ ಎಂಡಿಯ ಮೇಲೆಯೇ ಇದೆ. ಇದು ಪಾಲಿಸಿ ಮೇಕಿಂಗ್ ಅಷ್ಟೇ ಎಂದು ಹೇಳಿದರು.
ಸರ್ಕಾರಕ್ಕೂ ಇದಕ್ಕೂ ಸಂಬಂಧ ಇಲ್ಲ
ಯೂನಿಯನ್ ಬ್ಯಾಂಕ್ ಡೆಪ್ಯುಟಿ ಮ್ಯಾನೇಜರ್ ಮಹೇಶ.ಜೆ ಅವರು ಜೂನ್ 3ರಂದು ದೀಪಾ, ಸುಚಿಶ್ಮಿತಾ ರಾವ್, ಚೀಫ್ ಮ್ಯಾನೇಜರ್, ಕೃಷ್ಣಮೂರ್ತಿ ಸೇರಿ ಹಲವರ ವಿರುದ್ದ ದೂರು ನೀಡಿದ್ದಾರೆ. ಅದರ ಮೇಲೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಜನರಲ್ ಮ್ಯಾನೇಜರ್ ಗಿರೀಶ್ ಚಂದ್ರ ಜೋಶಿ, ಜೂನ್ 3ರಂದು ಎಂಜಿ ರಸ್ತೆಯ ಅದೇ ಅಧಿಕಾರಿಗಳ ವಿರುದ್ಧ ಸೆಕ್ಷನ್ 17A ಕ್ರಿಮಿನಲ್ ಕೇಸ್ ಬಗ್ಗೆ ಪತ್ರ ಬರೆದಿದ್ದಾರೆ. ದೀಪಾ, ಕೃಷ್ಣಾಮೂರ್ತಿ ಇಬ್ಬರೂ ದೂರು ಕೊಟ್ಟಿರೋದು ನೋಡೊಲ್ಲ. ಇದು ಸುಳ್ಳಾ? ಸರ್ಕಾರಕ್ಕೂ ಇದಕ್ಕೂ ಸಂಬಂಧ ಇಲ್ಲ . 25 ಕೋಟಿ ರೂ. ಅಧಿಕ ಹಣ ವರ್ಗಾವಣೆ ಆದ್ರೆ CBI ವ್ಯಾಪ್ತಿಗೆ ಬರುತ್ತೆ. ಯಾವಾಗ್ಲೂ ಕ್ಲಾರಿಟಿ ಇದ್ರೆ ಕ್ಲಿಯರ್ ಆಗಿರುತ್ತೆ. ಇಲ್ಲಾಂದ್ರೆ ಗೊಂದಲ ಆಗಿಬಿಡುತ್ತೆ. ಬ್ಯಾಂಕ್ ನವರೇ ಅಪ್ರೂವಲ್ ಕೊಡುತ್ತಾರೆ. ದೀಪಾ ಮತ್ತು ಸುಚಿಶ್ಮಿತಾ ಮೇಲೆ ಅದೇ ರೀತಿ ಇರುತ್ತೆ. ನೀಡ್ ಟೂ ಎಕ್ಸಾಮಿನ್ ಅಂತ ದೂರಿನಲ್ಲಿ ಬರೆದಿರುತ್ತಾರೆ. ಈ ಹಗರಣದಲ್ಲಿ ಎಸ್ ಐಟಿ, ಸಿಬಿಐ ವಿಚಾರಣೆ ನಡೆಸುತ್ತಿದ್ದಾರೆ. ಸೊಮೊಟೊ ವಿಚಾರಣೆಯನ್ನ ಇಡಿ ನಡೆಸುತ್ತಿದೆ. ಇಡಿ ಈಗಾಗಲೇ ದದ್ದಲ್, ನಾಗೇಂದ್ರ ಮನೆ ರೇಡ್ ಮಾಡಿದ್ದಾರೆ. ನಂತರ ವಿಚಾರಣೆಗೆ ಕರೆದು ನಾಗೇಂದ್ರರನ್ನ ಅರೆಸ್ಟ್ ಮಾಡಿದ್ದಾರೆ. ದದ್ದಲ್ನ ಸಹ ವಿಚಾರಣೆ ನಡೆಸಿದ್ದಾರೆ ಎಂದು ತಿಳಿಸಿದರು.
ಅಕ್ರಮವಾಗಿರುವ ಹಣ ಮಾಹಿತಿ ನೀಡಿದ ಸಿಎಂ
ಎಸ್ ಐಟಿನವರು ತನಿಖೆ ನಡೆಸಿದ್ದಾರೆ. ಎಸ್ ಐಟಿರಚನೆ ಆಗಿ ಎರಡು ತಿಂಗಳಾಗಿಲ್ಲ. ಈವರೆಗೆ 12 ಜನರನ್ನ ಬಂಧಿಸಿದ್ದಾರೆ. ಪದ್ಮನಾಭ, ಪರಶುರಾಮ, ನಾಗೇಶ್ವರ್ ರಾವ್, ಗಾಧಿರಾವ್, ಜಗದೀಶ್, ಸಾಯಿತೇಜ, ಶ್ರೀನಿವಾಸ್ ಸೇರಿ 9 ಜನರಿಗೆ ಜೈಲಿಗೆ ಕಳುಹಿಸಿದ್ದಾರೆ. 3 ಜನ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಇನ್ನು ಒಟ್ಟು 89.63 ಕೋಟಿಯಲ್ಲಿ 5 ಕೋಟಿ ವಾಪಾಸ್ ಬಂದಿದೆ. ದುಡ್ಡು ಹಂಚಿಕೊಂಡಿದ್ದ 14 ಕೋಟಿ 34 ಲಕ್ಷ ರೂ. ರಿಕವರಿ ಮಾಡಿದ್ದಾರೆ 84.63 ಲಕ್ಷ ಬಾಕಿ ಉಳಿದುಕೊಂಡಿದೆ ಎಂದು ಮಾಹಿತಿ ನೀಡಿದರು.