ವಂದೇ ಭಾರತ್ ಸ್ಲೀಪರ್ ಕೋಚ್ಗಳು ಬೆಂಗಳೂರಿನ ಬಿಇಎಂಎಲ್ ಉತ್ಪಾದನಾ ಘಟಕದಲ್ಲಿ ತಯಾರಾಗುತ್ತಿವೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಇಂದು (ಸೆ.1) ಬೆಂಗಳೂರಿನ ಬಿಇಎಂಎಲ್ಗೆ ಭೇಟಿ ನೀಡಿ ವಂದೇ ಭಾರತ್ ಸ್ಲೀಪರ್ ಕೋಚ್ ಪರಿಶೀಲನೆ ನಡೆಸಿದರು. ಅಶ್ವಿನಿ ವೈಷ್ಣವ್ ಅವರಿಗೆ ರಾಜ್ಯ ರೈಲ್ವೆ ಸಚಿವ ವಿ. ಸೋಮಣ್ಣ ಸಾಥ್ ನೀಡಿದರು. ಬಳಿಕ ಮಾತನಾಡಿದ ಅಶ್ವಿನಿ ವೈಷ್ಣವ್ “ಇಂದಿನಿಂದ ಮೂರು ತಿಂಗಳ ಒಳಗಾಗಿ ವಂದೇ ಭಾರತ್ ಸ್ಲೀಪರ್ ಕೋಚ್ಗಳು ಲೋಕಾರ್ಪಣೆಗೊಳ್ಳಲಿವೆ ಎಂದು ಭರವಸೆ ನೀಡಿದರು.