- ಆನಲೈನ್ನಲ್ಲಿ ಬುಕ್ ಮಾಡಿದ್ದ ಪಾರ್ಸೆಲ್ನಲ್ಲಿತ್ತು ನಾಗರಹಾವು
- ಬೆಂಗಳೂರಿನ ಸರ್ಜಾಪುರದಲ್ಲಿ ನಡೆದ ಘಟನೆ
ಆನ್ಲೈನ್ನಲ್ಲಿ ಎಕ್ಸ್ಬಾಕ್ಸ್ ಕಂಟ್ರೋಲರ್ ಬುಕ್ ಮಾಡಿದ್ದ ದಂಪತಿಗಳು ಪಾರ್ಸೆಲ್ ತೆರೆಯುತ್ತಿದ್ದಂತೆ ಬೆಚ್ಚಿ ಬಿದ್ದಿದ್ದಾರೆ. ಪಾರ್ಸೆಲ್ ತೆರೆಯುತ್ತಿದ್ದಂತೆ ಬುಸುಗುಟ್ಟುತ್ತಿರುವ ಹಾವು ದಂಗಾದ ದಂಪತಿಗಳು ತಮ್ಮ ಅನುಭವವನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. ಈ ಘಟನೆ ಬೆಂಗಳೂರಿನ ಸರ್ಜಾಪುರದಲ್ಲಿ ನಡೆದಿದೆ.
ಸಾಫ್ಟ್ವೇರ್ ಉದ್ಯೋಗದಲ್ಲಿರುವ ಈ ದಂಪತಿ ವಾರದ ಹಿಂದೆಯಷ್ಟೇ ಆನ್ಲೈನ್ನಲ್ಲಿ ಎಕ್ಸ್ಬಾಕ್ಸ್ ಕಂಟ್ರೋಲರ್ ಆರ್ಡರ್ ಮಾಡಿದ್ದರು. ಅದರಂತೆ ಪಾರ್ಸೆಲ್ ಮನೆ ಬಾಗಿಲಿಗೆ ಬಂದು ತಲುಪಿದೆ. ಪಾರ್ಸೆಲ್ ಓಪನ್ ಮಾಡುತ್ತಿದ್ದಂತೆ ಅದರೊಳಗೆ ಎಕ್ಸ್ಬಾಕ್ಸ್ ಕಂಟ್ರೋಲರ್ ಬದಲಾಗಿ ನಾಗರಹಾವೊಂದು ಜಡೆ ಎತ್ತಿ ನಿಂತಿದೆ. ತಕ್ಷಣ ಬಾಕ್ಸ್ ಅನ್ನು ಮುಚ್ಚಿದ್ದು, ತಮಗಾದ ಅನುಭವವನ್ನು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾಗಳಲ್ಲಿ ಹರಿಬಿಟ್ಟಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಪ್ಯಾಕೇಜಿಂಗ್ ಟೇಪ್ನಲ್ಲಿ ಸಿಲುಕಿಕೊಂಡಿದ್ದ ನಾಗರಹಾವು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ