ಕಾಮುಕನೊಬ್ಬ ಬೈಕ್ನಲ್ಲಿ ಬಂದು ಅಸಭ್ಯ ವರ್ತನೆ ತೋರಿದ್ದಾನೆ. ಬೈಕ್ ನಲ್ಲಿ ಬಂದು ವಿದ್ಯಾರ್ಥಿನಿಯರಿಗೆ ಖಾಸಗಿ ಅಂಗ ಪ್ರದರ್ಶನ ಮಾಡಿದ್ದಾನೆ. ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬರುವ ವಿಕೃತ ಕಾಮಿ ಯುವತಿಯರು ಹೆಚ್ಚಾಗಿರುವ ಕಾಲೇಜನ್ನು ಟಾರ್ಗೆಟ್ ಮಾಡ್ತಾನೆ. ಯುವತಿಯರು ಇರುವ ಕಡೆ ಬೈಕ್ ನಿಲ್ಲಿಸಿ ಖಾಸಗಿ ಅಂಗ ತೋರಿಸಿ ಪರಾರಿ ಆಗ್ತಾನಂತೆ. ವಿವಿ ಪುರಂ ನಲ್ಲಿ ಕಾಮುಕನ ಕೃತ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ.
ಕಾಮುಕನ ಕೃತ್ಯ ಮೊಬೈಲ್ನಲ್ಲಿ ಸೆರೆ ಹಿಡಿದ ವಿದ್ಯಾರ್ಥಿನಿ ಕಾಮುನ ವಿರುದ್ಧ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಿದ್ದಾಳೆ. ಘಟನೆ ಬಗ್ಗೆ ಮಾಹಿತಿ ಕಲೆ ಹಾಕಿದ ವಿವಿ ಪುರಂ ಪೊಲೀಸರು ಕಾಮುಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 48 ವರ್ಷದ ರೆಹಮಾನ್ ಎಂಬಾತ ಬೈಕ್ ಮೇಲೆ ಬಂದು ಯುವತಿಗೆ ಖಾಸಗಿ ಅಂಗ ತೋರಿಸಿ ಎಸ್ಕೇಪ್ ಆಗಿದ್ದ. ಎಸ್ಕೇಪ್ ಆದ ಮೂರು ಗಂಟೆಯಲ್ಲೇ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.