- ರಾಜ್ಯದಲ್ಲಿ ದಿನದಿಂದ ದಿನಕ್ಕೆ ವಸ್ತುಗಳ ದರ ಹೆಚ್ಚಳ
- ಕುಡಿಯುವ ನೀರಿನ ದರ ಹೆಚ್ಚಿಸಲು ಮುಂದಾದ ಸರ್ಕಾರ
ರಾಜ್ಯದಲ್ಲಿ ದಿನದಿಂದ ದಿನಕ್ಕೆ ವಸ್ತುಗಳ ಮೇಲೆ ದರ ಹೆಚ್ಚಾಗುತ್ತಲೇ ಇದೆ. ಈಗಾಗಲೇ ಬೆಂಗಳೂರಿನಲ್ಲಿ ತೈಲ ಹಾಗೂ ತರಕಾರಿಯ ಬೆಲೆ ಜಾಸ್ತಿ ಆಗಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ. ಇದರ ಬೆನ್ನಲೇ ಈಗ ರಾಜ್ಯ ಸರ್ಕಾರ ಕುಡಿಯುವ ನೀರಿನ ಮೇಲೂ ದರ ಹೆಚ್ಚಿಸಲು ಮುಂದಾಗಿದೆ. ಉಪಮುಖ್ಯಮಂತ್ರಿ ಡಿ. ಕೆ ಶಿವಕುಮಾರ್, ಕಳೆದ 14 ವರ್ಷಗಳಿಂದ ನೀರಿನ ದರವನ್ನು ಹೆಚ್ಚಿಸಿಲ್ಲ. ಈಗ ದರ ಏರಿಕೆ ಅನಿವಾರ್ಯವಾಗಿದೆ. ಜಲಮಂಡಳಿಯ ಖರ್ಚು ವೆಚ್ಚಗಳು ಹೆಚ್ಚುತ್ತಿವೆ. ಮಂಡಳಿಯ ಆರ್ಥಿಕ ನಷ್ಟ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಇದರಿಂದ ನೀರಿನ ದರ ಹೆಚ್ಚಿಸಬೇಕಾಗುತ್ತದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಗೃಹಬಳಕೆ, ವಾಣಿಜ್ಯ ಸೇರಿದಂತೆ ಎಲ್ಲ ರೀತಿಯ ನೀರು ಪೂರೈಕೆಗೆ ಶೇ.40ರಷ್ಟು ಹೆಚ್ಚಳ ಮಾಡಲು ಜಲ ಮಂಡಳಿ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದು, ಶೇ.20-25ರಷ್ಟು ಶುಲ್ಕ ಹೆಚ್ಚಿಸುವ ಸಾಧ್ಯತೆಗಳಿವೆ ಆದ್ರೆ ಅಧಿಕೃತ ಮಾಹಿತಿ ಹೊರಬಂದಿಲ್ಲ.
ಈಗಾಗಲೇ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಿಸಲಾಗಿದೆ. ಇದರ ಕುರಿತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗ ನೀರಿನ ಬೆಲೆ ಏರಿಕೆಗೆ ಜನ ಸಾಮಾನ್ಯರು ವಿರೋಧ ವ್ಯಕ್ತ ಪಡಿಸಿದ್ದಾರೆ. ಅಗತ್ಯ ವಸ್ತುಗಳ ಬೆಲೆಯೂ ಗಗನಕ್ಕೇರಿದೆ. ಸಾರ್ವಜನಿಕರು ಪಾವತಿಸುವ ನೀರಿನ ಬಿಲ್ನಿಂದ, ಜಲಮಂಡಳಿ ನೌಕರರ ಸಂಬಳ ಮತ್ತು ವಿದ್ಯುತ್ ಬಿಲ್ ಕಟ್ಟಲು ಸಾಕಾಗುತ್ತಿಲ್ಲ. ಆದ್ದರಿಂದ ಬೆಲೆ ಏರಿಕೆ ಅನಿವಾರ್ಯ. ಶುಲ್ಕ ಹೆಚ್ಚಳದಿಂದ ಶೇ.70 ರಷ್ಟಾದರೂ ಸರಿದೂಗಿಸಲು ಪ್ರಯತ್ನ ಮಾಡುತ್ತೆವೆ ಎಂದು ಅವರು ತಿಳಿಸಿದ್ದಾರೆ.