ರಾಜ್ಯವನ್ನು ಡ್ರಗ್ಸ್ ಮುಕ್ತವಾಗಿ ಮಾಡಬೇಕು ಎನ್ನುವ ಪ್ರಯತ್ನದಲ್ಲಿ ಪೊಲೀಸ್ ಇಲಾಖೆ ಹಾಗೂ ಸರ್ಕಾರ ಪ್ರಯತ್ನ ಮಾಡುತ್ತಿದೆ. ಆದರೆ ನಿರ್ಜನ ಪ್ರದೇಶವನ್ನು ಆಯ್ಕೆ ಮಾಡಿಕೊಂಡ ಕೆಲ ವ್ಯಸನಿಗಳು ಅವುಗಳನ್ನು ಗಾಂಜಾ ಅಡ್ಡೆಗಳನ್ನಾಗಿ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಯಲಹಂಕ ಅಟ್ಟೂರು ಸ್ಮಶಾನದ ಜಾಗದಲ್ಲಿ ಗಾಂಜಾ ಗಿಡಗಳು ಬೆಳೆದಿರುವುದು ಬೆಳಕಿಗೆ ಬಂದಿದೆ.
ಯಲಹಂಕ ಅಟ್ಟೂರು ಸ್ಮಶಾನದಲ್ಲಿ ಹತ್ತಕ್ಕೂ ಹೆಚ್ಚು ಗಾಂಜಾ ಗಿಡಗಳು ಪತ್ತೆಯಾಗಿವೆ. ನಿತ್ಯ ಕೆಲ ಯುವಕರು ಬಂದು ಇಲ್ಲಿ ಗಾಂಜಾ ಸೇವನೆ ಮಾಡಿ ಹೋಗುತ್ತಾರೆ. ಸಣ್ಣ ವಯಸ್ಸಿನಲ್ಲಿ ಯುವಕರು ದಾರಿ ತಪ್ಪುತ್ತಿರುವುದು ಜನರಲ್ಲಿ ತಮ್ಮ ಮಕ್ಕಳ ಬಗ್ಗೆ ಆತಂಕ ಹೆಚ್ಚಿಸಿದೆ. ಸದ್ಯ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಯಾರೂ ಇಲ್ಲದ ಸಮಯದಲ್ಲಿ ಸ್ಮಶಾನವನ್ನು ಅಡ್ಡೆಯನ್ನಾಗಿ ಮಾಡಿಕೊಂಡ ವ್ಯಸನಿಗಳು ಗಾಂಜಾ ಸೇವನೆ ಮಾಡುತ್ತಿದ್ದಾರೆ. ಈ ವೇಳೆ ಬಿದ್ದ ಬೀಜಗಳಿಂದ ಸ್ಮಶಾನದಲ್ಲಿ ಗಿಡಗಳು ಬೆಳೆದಿವೆ. ಇದೇ ಗಿಡಗಳನ್ನು ಪುನ: ಬಳಕೆಗೆ ವ್ಯಸನಿಗಳು ಬಳಕೆ ಮಾಡುತ್ತಿರಬಹುದು ಎಂದು ಶಂಕಿಸಲಾಗಿದೆ.