ಬಾಂಗ್ಲಾದೇಶದಲ್ಲಿ ಹಿಂಸಾಚಾರ ಭುಗಿಲೆದ್ದ ಬೆನ್ನಲ್ಲೇ ಅತ್ತ ಪ್ರಧಾನಿ ಶೇಖ್ ಹಸೀನಾ ಅವರು ದೇಶ ತೊರೆಯುತ್ತಿದ್ದಂತೆ, ಇತ್ತ ಢಾಕಾದಲ್ಲಿ ಸಾವಿರಾರು ಪ್ರತಿಭಟನಾಕಾರರು ಪ್ರಧಾನಿ ಮಂತ್ರಿ ಅರಮನೆಗೆ ಮುತ್ತಿಗೆ ಹಾಕಿದ್ದಾರೆ.
ಹಸೀನಾ ಅವರ ಅಧಿಕೃತ ನಿವಾಸ ಗಣಬಧನ್ ಒಳಗೆ ನುಗ್ಗಿದ ಪ್ರತಿಭಟನಾಕಾರರು ಸಿಕ್ಕ ಸಿಕ್ಕ ವಸ್ತುಗಳನ್ನೆಲ್ಲ ದೋಚುತ್ತಿದ್ದು, ರೆಫ್ರಿಜರೇಟರ್ನಲ್ಲಿ ಇಡಲಾಗಿದ್ದ ಮೀನು, ಕೋಳಿ, ತರಕಾರಿಗಳನ್ನು ತಿನ್ನುತ್ತಿರುವುದು, ಅಲ್ಲಿದ್ದ ಪೀಠೋಪಕರಣಗಳ ಮೇಲೆ ಹತ್ತಿ ಕುಣಿದಾಡುತ್ತಿರುವುದು, ಇನ್ನು ಕೆಲವರು ತಮಗೆ ಸಿಕ್ಕ ವಸ್ತುಗಳನ್ನೆಲ್ಲ ಬಾಚಿಕೊಂಡು ಹೊತ್ತೊಯ್ಯುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
https://x.com/RoyalFMRwanda/status/1820493463235993686