ದೇಶದಲ್ಲಿ ನವರಾತ್ರಿ ಸಂಭ್ರಮ ಜೋರಾಗಿದೆ. ದುರ್ಗಾ ದೇವಿಯ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಮತ್ತೊಂದೆಡೆ, ಬಾಂಗ್ಲಾದೇಶದ ಸಖ್ತೀರಾದ ಶ್ಯಾಮನಗರದಲ್ಲಿರುವ ಪ್ರಸಿದ್ಧ ಜೇಶೋರೇಶ್ವರಿ ಕಾಳಿ ದೇವಸ್ಥಾನದ ಚಿನ್ನದ ಕಿರೀಟ ಕಳ್ಳತನವಾಗಿದೆ. 51 ಶಕ್ತಿ ಪೀಠಗಳಲ್ಲಿ ಈ ದೇಗುಲ ಕೂಡ ಒಂದಾಗಿದೆ. ಕಳ್ಳತನವಾಗಿರುವ ದೃಶ್ಯ ದೇವಸ್ಥಾನದ ಸಿಸಿಟಿವಿಯಲ್ಲಿ ದಾಖಲಾಗಿದೆ. ಅದರಲ್ಲಿ ಯುವಕನೊಬ್ಬ ಚಿನ್ನದ ಕಿರೀಟವನ್ನು ತೆಗೆದುಕೊಂಡು ಹೋಗ್ತಿರುವ ದೃಶ್ಯ ಬಹಿರಂಗಗೊಂಡಿವೆ. ಚಿನ್ನದ ಕಿರೀಟವನ್ನು ಪ್ರಧಾನಿ ನರೇಂದ್ರ ಮೋದಿ ಉಡುಗೊರೆಯಾಗಿ ನೀಡಿದ್ದರು.
ಬಾಂಗ್ಲಾದೇಶದ ಈ ಕಾಳಿ ದೇವಸ್ಥಾನದ ಕಿರೀಟಕ್ಕೂ ಪ್ರಧಾನಿ ಮೋದಿಗೂ ವಿಶೇಷ ಸಂಬಂಧ ಇದೆ. 2021ರಲ್ಲಿ ಮೋದಿ ಬಾಂಗ್ಲಾದೇಶಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದರು. ಈ ವೇಳೆ ಕಿರೀಟವನ್ನು ಉಡುಗೊರೆಯಾಗಿ ನೀಡಿದ್ದರು. ಇದೀಗ ಅದೇ ಚಿನ್ನದ ಕಿರೀಟ ಕಳ್ಳತನವಾಗಿದೆ. ಗುರುವಾರ ಮಧ್ಯಾಹ್ನ 2:47 ರಿಂದ 2:50 ರ ನಡುವೆ ದೇವಸ್ಥಾನದಲ್ಲಿ ಕಳ್ಳತನ ನಡೆದಿದೆ. ದೇವಾಲಯದ ಅರ್ಚಕ ದಿಲೀಪ್ ಕುಮಾರ್ ಬ್ಯಾನರ್ಜಿ ದೈನಂದಿನ ಪೂಜೆಯನ್ನು ಪೂರ್ಣಗೊಳಿಸಿದ ನಂತರ, ದೇವಾಲಯದ ಬೀಗಗಳನ್ನು ನಿರ್ವಹಣೆ ಮಾಡುವ ವ್ಯಕ್ತಿಗೆ ನೀಡಿದ್ದರು.
ನಿರ್ವಹಣೆ ಮಾಡುತ್ತಿದ್ದ ವ್ಯಕ್ತಿ ರೇಖಾ ಸರ್ಕಾರ್, ಬೇರೆ ಕೆಲಸದಲ್ಲಿ ಬ್ಯುಸಿಯಿದ್ದ. ಈ ವೇಳೆ ಕಾಳಿ ಮಾತೆಯ ಚಿನ್ನದ ಕಿರೀಟ ಕಾಣೆಯಾಗಿದೆ. ರೇಖಾ ಸರ್ಕಾರ್ ವಾಪಸ್ ಬಂದು ನೋಡಿದಾಗ ಕಾಳಿ ಮಾತೆಯ ಚಿನ್ನದ ಕಿರೀಟ ಕಾಣೆಯಾಗಿದೆ. ಈ ವಿಷಯವನ್ನು ಕುಡಲೇ ಎಲ್ಲರಿಗೂ ತಿಳಿಸಿದ್ದಾರೆ. ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.