ವಕ್ಫ್ ಬೋರ್ಡ್ನಿಂದ ಭೂಮಾಲೀಕರು ಮತ್ತು ರೈತರಿಗೆ ಸಮಸ್ಯೆಯಾಗುತ್ತಿದೆ. ಧಾರ್ಮಿಕ ಸಂಸ್ಥೆಗಳು ಮಠ ಮಾನ್ಯಗಳ ಜಮೀನನ್ನ ವಕ್ಫ್ ಆಕ್ರಮಿಸಿಕೊಳ್ಳುತ್ತಿದೆ. ವಕ್ಫ್ನ ಈ ನಡೆ ಕಾನೂನು ಅಸಮಾನತೆ ಮತ್ತು ಕ್ರೂರತೆಯನ್ನ ಒಳಗೊಂಡಿದೆ. ವಕ್ಫ್ಗೆ ಅಪರಿಮಿತಿ ಅಧಿಕಾರ ನೀಡಲಾಗಿದ್ದು, ಇದರಿಂದ ಭಾರತೀಯರಿಗೆ ಅನ್ಯಾಯವಾಗುತ್ತಿದೆ. ಹೀಗಾಗಿ ವಕ್ಫ್ ಆಸ್ತಿಯನ್ನ ರಾಷ್ಟ್ರೀಕರಣ ಮಾಡಿ ಸಮಾಜಕ್ಕೆ ಉಪಯೋಗಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಮತ್ತೊಂದು ಪಾಕಿಸ್ತಾನ ಆಗಲು ಬಿಡಬಾರದು. ಹೀಗಾಗಿ ಪತ್ರ ಬರೆದಿದ್ದೇನೆ ಎಂದು ಯತ್ನಾಳ್ ಹೇಳಿದ್ದಾರೆ. ಯತ್ನಾಳ್ ಪತ್ರ ಬರೆದಿರುವ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಎಂ ಡಿಕೆ ಶಿವಕುಮಾರ್, ಮ್ಯಾಡ್, ಮೆಂಟಲ್ಗಳ ಬಗ್ಗೆ ಮಾತನಾಡಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ.
ಇನ್ನೂ ಕಂಡ ಕಂಡ ಜಮೀನಿಗೆ ವಕ್ಫ್ ಆಸ್ತಿ ಅಂತಾ ನೋಟಿಸ್ ನೀಡಲಾಗ್ತಿದೆ. ಇದು ಸರ್ಕಾರದಿಂದ ರೈತರ ಜಮೀನನ್ನ ವಶಪಡಿಸಿಕೊಳ್ಳೋ ಹುನ್ನಾರ ಎಂದು ವಾಗ್ದಾಳಿ ನಡೆಸಿದ ಶಾಸಕ ಅಶ್ವತ್ಥ್ ನಾರಾಯಣ, ಅಧಿಕಾರ ದುರ್ಬಳಕೆ ಮಾಡ್ತಿರೋ ಜಮೀರ್ನನ್ನ ವಜಾ ಮಾಡಿ ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಕನ್ನಡ ಸ್ವರಗಳಲ್ಲಿ ರಾಜ್ಯೋತ್ಸವದ ಶುಭಾಶಯ ಕೋರಿದ ಗೂಗಲ್!