ವಾಲ್ಮೀಕಿ ನಿಗಮ ಹಗರಣ ಈಗ ಕೇಂದ್ರ v/s ರಾಜ್ಯ ಸರ್ಕಾರವಾಗಿ ಬದಲಾಗಿರೋದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ವಾಲ್ಮೀಕಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಅವರು ಇಡಿ ಅಧಿಕಾರಿಗಳ ಕಣ್ಣು ತಪ್ಪಿಸಿ ಎಸ್ಐಟಿ ಮುಂದೆ ಹಾಜರಾಗಿದ್ದಾರೆ. ಪ್ರಕರಣದಲ್ಲಿ ಈಗಾಗಲೇ ಇಡಿ ಅಧಿಕಾರಿಗಳು ಮಾಜಿ ಸಚಿವ ನಾಗೇಂದ್ರರನ್ನು ಬಂಧಿಸಿದ್ದಾರೆ. ಇತ್ತ ನಿನ್ನೆ ತಡರಾತ್ರಿಯಿಂದ ನಾಪತ್ತೆಯಾಗಿದ್ದ ಬಸನಗೌಡ ದದ್ದಲ ದಿಢೀರ್ ಅಂತ ಎಸ್ಐಟಿ ಅಧಿಕಾರಗಳ ಮುಂದೆ ಪ್ರತ್ಯಕ್ಷರಾಗಿ ನನ್ನನ್ನು ಬಂಧಿಸಿ ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ. ಎಸ್ಐಟಿ ಅಧಿಕಾರಿ ಡಿವೈಎಸ್ಪಿ ಶ್ರಿನಿವಾಸ್ ಮುಂದೆ ಬಂಧಿಸುವಂತೆ ದದ್ದಲ್ ಕೇಳಿಕೊಂಡಿದ್ದಾರೆ. ಎಸ್ಐಟಿ ತನಿಖೆಗೆ ಹಾಜರಾಗುವಂತೆ ನೋಟಿಸ್ ನೀಡಿತ್ತು. ಈ ಮಧ್ಯೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದರು. ಇ.ಡಿ ದಾಳಿ ಮುಗಿದ ಬೆನ್ನಲ್ಲೇ ಎಸ್ಐಟಿ ಮುಂದೆ ಹಾಜರಾಗಿರುವ ದದ್ದಲ್ ಅರೆಸ್ಟ್ ಮಾಡುವಂತೆ ಮನವಿ ಮಾಡಿದ್ದಾರೆ. ಈ ಬೆನ್ನಲ್ಲೇ ಈಗಾಗಲೇ ಇಡಿ ಅಧಿಕಾರಿಗಳು ಬಸನಗೌಡ ದದ್ದಲಗಾಗಿ ಶೋಧ ನಡೆಸಿದ್ದಾರೆ ಎನ್ನಲಾಗಿದೆ.