ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿದ್ದ ರಾಜ್ಯದ ಉಪಚುನಾವಣೆಯ ಫಲಿತಾಂಶ ಹೊರಬಿದ್ದು ರಾಜಕಾರಣಿಗಳು ಸಂತೋಷ ಸಂಭ್ರಮ ಹಾಗೂ ದುಃಖ ಎಲ್ಲವನ್ನೂ ಅನುಭವಿಸಿದ್ದಾಗಿದೆ. 3 ಕ್ಷೇತ್ರಗಳಲ್ಲಿ ಕಾಂಗ್ರೆಸ್ ದಿಗ್ವಿಜಯ ಸಾಧಿಸಿದೆ. ಬಿಜೆಪಿ ಸೋತು ಸುಣ್ಣವಾಗಿದೆ. ಈ ಬಗ್ಗೆ ಸ್ಪಷ್ಟನೆ ನೀಡಲು ದೆಹಲಿ ಮಟ್ಟದಲ್ಲಿ ನಾಯಕರ ಭೇಟಿಗೆ ಮುಂದಾಗಿದ್ದಾರೆ ಬಿಜೆಪಿ ನಾಯಕರು.
ಬಿಜೆಪಿಯ ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ್ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ ಶಿಗ್ಗಾಂವಿ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಲು ಬಸವರಾಜ್ ಬೊಮ್ಮಾಯಿ ದೆಹಲಿಗೆ ತೆರಳಿದ್ದಾರೆ. ರಾಜ್ಯ ಬಿಜೆಪಿ ನಾಯಕರ ವಿರುದ್ಧ ಚಾಡಿ ಹೇಳಿದ್ರಾ ಬೊಮ್ಮಾಯಿ.? ಶಿಗ್ಗಾಂವಿಯಲ್ಲಿ ಮಗನ ಸೋಲಿಗೆ ರಾಜ್ಯ ಬಿಜೆಪಿ ನಾಯಕರೇ ಕಾರಣ ಎಂದು ಬಸವರಾಜ್ ಬೊಮ್ಮಾಯಿ ಜೆಪಿ ನಡ್ಡಾಗೆ ಕಂಪ್ಲೇಂಟ್ ಹೇಳಿದ್ದಾರೆ.
ದೆಹಲಿಯಲ್ಲಿ ಜೆಪಿ ನಡ್ಡಾಅವರನ್ನು ಸಂಸದ ಬೊಮ್ಮಾಯಿ ಭೇಟಿಯಾಗಿದ್ದರು. ಆ ವೇಳೆ ಶಿಗ್ಗಾಂವಿ ಉಪಚುನಾವಣೆಯಲ್ಲಿ ನಮಗೆ ಪಕ್ಷದ ನೆರವು ಸಿಗಲಿಲ್ಲ, ಪಕ್ಷದ ಆಂತರಿಕ ಕಿತ್ತಾಟವನ್ನ ಸರಿಪಡಿಸೋ ಕೆಲಸವನ್ನೂ ಮಾಡಲಿಲ್ಲ, ರಾಜ್ಯ ಬಿಜೆಪಿಯಿಂದ ನಮಗೆ ಸಿಗಬೇಕಿದ್ದ ಹೆಲ್ಪ್ ಸಿಗಲಿಲ್ಲ. ನನ್ನ ಮಗ ಅಭ್ಯರ್ಥಿ ಅಂತ ಯಾರೂ ತಲೆಕೆಡಿಸಿಕೊಂಡಿಲ್ಲ. ಜೊತೆಗೆ ಜಾತಿ ಸಮೀಕರಣ ಮಾಡುವಲ್ಲಿಯೂ ವಿಫಲರಾಗಿದ್ದಾರೆ. ಜಾತಿವಾರು ಮತ ಸೆಳೆಯಲು ರಾಜ್ಯ ನಾಯಕರು ನಿರ್ಲಕ್ಷ್ಯ ತೋರಿದರು. ಸಣ್ಣ ಸಣ್ಣ ಜಾತಿಗಳ ಮತ ಕ್ರೊಢೀಕರಣಕ್ಕೆ ಮುಂದಾಗಲಿಲ್ಲ ಹೀಗಾಗಿ ನಿರ್ಲಕ್ಷ್ಯದಿಂದಲೇ ನಾವು ಶಿಗ್ಗಾಂವಿಯನ್ನ ಕಳೆದುಕೊಂಡಿದ್ದೇವೆ ಎಂದು ಶಿಗ್ಗಾಂವಿ ಸೋಲಿನ ಬಗ್ಗೆ ಜೆಪಿ ನಡ್ಡಾಗೆ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ.