ಹುಬ್ಬಳ್ಳಿ: ಲೋಸಸಭೆ ಚುನಾವಣೆಯ ನಂತರ ರಾಜ್ಯ ಸರ್ಕಾರದಿಂದ ಶಕ್ತಿ ಯೋಜನೆ ನಿಲ್ಲಿಸುವ ಪ್ರಸ್ತಾಪ ಆರಂಭವಾಗಿದ್ದು, ಅರ್ಧದಷ್ಟು ಫಲಾನುಭವಿಗಳನ್ನು ಹೊರಗಿಡುವ ಪಯತ್ನ ಮಾಡಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ, ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇವಲ ರಾಜಕಾರಣಕ್ಕಾಗಿ ಶಕ್ತಿ ಯೋಜನೆ ಜಾರಿಗೆ ತರಲಾಗಿದ್ದು ಅದನ್ನು ಅದನ್ನು ನಿಲ್ಲಿಸುವ ಪ್ರಸ್ತಾಪ ಈಗ ಅಲ್ಲಾ ಲೋಕಸಭಾ ಚುನಾವಣೆ ನಂತರ ಆರಂಭ ಆಗಿದ್ದು ಯಾವಾಗ ಲೋಕಸಭಾ ಚುನಾವಣೆಯಲ್ಲಿ ಲಾಭ ಆಗಲಿಲ್ಲ ಅಂದಿನಿಂದಲೇ ಇದನ್ನು ಹಂತ ಹಂತವಾಗಿ ಕಡಿತ ಮಾಡಲು ಹೊರಟಿತು. ಸರ್ಕಾರ ಅಧಿಕಾರಗಳಿಂದ ಪರಿಷ್ಕರಣೆ ಮಾಡಲು ಮುಂದಾಯಿತು ಸಾಕಷ್ಟು ಕರಾರು ಹಾಕಲಾಯಿತು, ಕೇಲವು ಮಾರ್ಪಾಡು ಮಾಡಲಾಯಿತು. ಎಷ್ಟು ಜನ ಈ ಯೋಜನೆ ಲಾಭ ಪಡೆಯುತ್ತಾರೆ ಅದರಲ್ಲಿ ಅರ್ಧದಷ್ಟು ಕಡಿತ ಮಾಡಲಾಗಿದೆ ಎಂದರು.
ಈಗ ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿ ಆಗಿದ್ದು ಮುಖ್ಯಮಂತ್ರಿ ಎಷ್ಟೇ ಹೇಳಲಿ, ಏನೇ ಹೇಳಲಿ, ಸರ್ಕಾರದ ಆರ್ಥಿಕ ಪರಿಸ್ಥಿತಿಯ ಬಗ್ಗೆ ನಾ ಹೇಳುತ್ತಿಲ್ಲ ಆಡಳಿತಾರೂಢ ಪಕ್ಷದ ಶಾಸಕರೇ ಹೇಳತ್ತಿದ್ದಾರೆ. ರಾಜ್ಯದಲ್ಲಿ ಒಂದು ಸಣ್ಣ ರಸ್ತೆ ದುರಸ್ತಿ ಸಹ ಮಾಡಲಿಕ್ಕೆ ಆಗದಷ್ಟು ಆರ್ಥಿಕ ವ್ಯವಸ್ಥೆ ಕೆಟ್ಟಿದೆ. ರಾಜ್ಯ ಸರ್ಕಾರ ಸಾಲದ ಸುಳಿಯಲ್ಲಿ ಸಿಕ್ಕಿದ್ದು ಕಳೆದ ವರ್ಷ ಒಂದು ಲಕ್ಷ ಕೋಟಿ ಈ ವರ್ಷ ಒಂದು ಲಕ್ಷ ಕೋಟಿ ಸಾಲ ಮಾಡಿದೆ ಎಂದ ಹೇಳಿದರು.
ದೊಡ್ಡ ಪ್ರಮಾಣದ ಬಜೆಟ್ ಮಂಡನೆ ಮಾಡಲಾಯಿತು. ಜನರ ತಲೆ ಮೇಲೆ 20 ಸಾವಿರ ಕೋಟಿಗಿಂತ ಹೆಚ್ಚು ತೆರಿಗೆ ವಿಧಿಸಲಾಯಿತು. ಸರ್ಕಾರ ಆರ್ಥಿಕ ನಿರ್ವಹಣೆ ಮಾಡದಷ್ಟು ವಿಫಲ ಆಗಿದ್ದು. ಕೇಂದ್ರ ಸರ್ಕಾರದ ಮೇಲೆ ಗೂಬೆ ಕುಳ್ಳಿರುಸುವ ಕೆಲಸ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರ ಹಾಗೂ ಆರ್ಥಿಕ ಸಚಿವೆ ನಿರ್ಮಲಾ ಸಿತಾರಾಮನ್ ಅವರು ರಾಜ್ಯಕ್ಕೆ ಎಷ್ಟು ಹಣ ಕೊಡಬೇಕು ಅಷ್ಟು ಕೊಡಲಾಗಿದೆ ಎಂದು ರಾಜ್ಯ ಸರ್ಕಾರದ ಆರೋಪಕ್ಕೆ ಸ್ಪಷ್ಟೀಕರಣ ನೀಡಿದ್ದಾರೆ. ಮುಖ್ಯಮಂತ್ರಿಗಳು ಸುಳ್ಳನ್ನೇ ಪದೇ ಪದೇ ಹೇಳುವ ಕೆಲಸ ಮಾಡುತಿದ್ದಾರೆ ಎಂದರು.
ಇನ್ನು ವಾಲ್ಮೀಕಿ ಹಗರಣದಲ್ಲಿ 187 ಕೋಟಿಯಲ್ಲಿ 100 ಕೋಟಿ ಹಗರಣ ಆಗಿದೆ ಎಂದು ಮುಖ್ಯಮಂತ್ರಿಗಳೇ ಒಪ್ಪಿಕೊಂಡಿದ್ದಾರೆ ಇದರಲ್ಲಿ 60 ಫರ್ಸೇಂಟ್ ಕಮೀಷನ್ ಸರಕಾರ ಅಂತಾ ಮುಖ್ಯಮಂತ್ರಿಗಳೇ ಒಪ್ಪಿಕೊಂಡಿದ್ದಾರೆ. ಬೇಕಾಬಿಟ್ಟಿ ಭ್ರಷ್ಟಾಚಾರ ಆಡಳಿತ ಮಾಡಿ ಎಲ್ಲಾ ರಂಗಗಳಲ್ಲಿ ವಿಫಲ ಆಗಿದೆ. ಬರುವಂತಹ ದಿನಗಳಲ್ಲಿ ಆರ್ಥಿಕವಾಗಿ ಸರಕಾರ ದಿವಾಳಿ ಆಗುತ್ತದೆ ಕರ್ನಾಟಕ ಆರ್ಥಿಕವಾಗಿ ಸಂಕಷ್ಟದಲ್ಲಿ ಸಿಗುವುದು ಗ್ಯಾರಂಟಿ. ಇಂತಹ ಸರ್ಕಾರ ಬೇಕೆ ಎನ್ನುವ ಸ್ಥಿತಿಯಲ್ಲಿ ಜನರು ಇದ್ದಾರೆ ಎಂದರು.
ಇನ್ನುವಕ್ಪ್ ದಿಂದ ಹಿಂದುಗಳ ಭೂಮಿ, ದೇವಾಲಯ ವಶಕ್ಕೆ ಪಡೆಯುವ ಹುನ್ನಾರದ ವಿಚಾರವಾಗಿ ಮಾತನಾಡಿದ ಅವರು ವಕ್ಪ್ ವಿಚಾರವಾಗಿ ಸೋಮವಾರ ರಾಜ್ಯ ವ್ಯಾಪ್ತಿ ಪ್ರತಿಭಟನೆ ನಡೆಸಲಾಗುವುದು. ಈ ಕುರಿತು ಎಲ್ಲ ಸಿದ್ಧತೆ ಆಗಿದೆ ಎಲ್ಲ ಕ್ಷೇತ್ರದಲ್ಲಿ ಪ್ರತಿಭಟನೆ ಮಾಡಲಾಗುತ್ತದೆ. ವಕ್ಪ್ ಹಾವಳಿ ಹೆಚ್ಚಾಗುತ್ತಿದ್ದು ವಕ್ಪ್ ಬಗೆದಷ್ಟು ಬಯಲಾಗುತ್ತಿದೆ. ಇದರ ವಿರುದ್ದ ನಮ್ಮ ಪಕ್ಷ ಹೋರಾಟಕ್ಕೆ ನಿರ್ಣಯ ತೆಗೆದುಕೊಂಡಿದೆ ಎಂದರು.
ಸಿಎಂ ಪ್ರಧಾನಿಗೆ ಗೌರವ ನೀಡಲಿ: ಬಸವರಾಜ ಬೊಮ್ಮಾಯಿ
ಹುಬ್ಬಳ್ಳಿ:ದೇಶದ ಪ್ರಧಾನಿಯನ್ನು ಹೇಗೆ ಸಂಬೋಧಿಸಬೇಕೆಂಬುದು ರಾಜ್ಯದ ಮುಖ್ಯಮಂತ್ರಿಗಳಿಗೆ ಗೊತ್ತಿಲ್ಲವೆಂದರೆ ದುರ್ದೈವ, ಮುಖ್ಯಮಂತ್ರಿಗಳು ಪ್ರಧಾನಿಗೆ ಗೌರವ ಕೊಡಬೇಕು ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಪ್ರಧಾನ ಮಂತ್ರಿ ಟ್ವಿಟ್ ಗೆ ಮುಖ್ಯಮಂತ್ರಿ ಸಿದ್ದರಾಮ ಪ್ರತಿಕ್ರಿಯೆ ವಿಚಾರಕ್ಕೆ ಕಿಡಿ ಕಾರಿದ ಅವರು, ಸಿದ್ದರಾಮಯ್ಯ ಅವರು ಒಬ್ಬ ರಾಜ್ಯದ ಮುಖ್ಯಮಂತ್ರಿ. ಮುಖ್ಯಮಂತ್ರಿಯಾಗಿ ಪ್ರಧಾನ ಮಂತ್ರಿಗೆ ಯಾವ ರೀತಿ ಸಂಬೋಧಿಸಬೇಕು ಅನ್ನುವುದು ಗೊತ್ತಿಲ್ಲವೇ.. ಸೌಜನ್ಯ ಮರೆತಿದ್ದಾರಂದರೆ ದುರ್ದೈವದ ಸಂಗತಿ ಎಂದರು.
ಅಭಿಪ್ರಾಯದಲ್ಲಿ ಭಿನ್ನಾಭಿಪ್ರಾಯ ಇರಬಹುದು. ನಾವು ಮುಖ್ಯಮಂತ್ರಿಗಳಿಗೆ ಯಾವ ರೀತಿ ಗೌರವ ಕೊಡುತ್ತೇವೆ. ಅವರು ಪ್ರಧಾನಮಂತ್ರಿಗೆ ಕೊಡಬೇಕು. ಇಷ್ಟು ಕೂಡ ಸೌಜನ್ಯ ಇಲ್ಲದೆ ಹೋದರೆ ಹೇಗೆ..? ಅವರ ನಡೆ ಪ್ರಜಾಪ್ರಭುತ್ವಕ್ಕೆ ಹಾಗೂ ಒಕ್ಕೂಟ ವ್ಯವಸ್ಥೆಗೆ ಇದು ಶೋಭೆ ತರುವಂತದ್ದಲ್ಲ ಎಂದು ಹೇಳಿದರು.