ಬಿಜೆಪಿಯಲ್ಲಿ ಎಲ್ಲವೂ ಅಲ್ಲೋಲ ಕಲ್ಲೋಲ. ಒಬ್ಬರ ಮೇಲೊಬ್ಬರು ಮುಗಿಬೀಳಲು ಮುಂದಾಗಿದ್ದು, ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಶಿಗ್ಗಾಂವಿ ಬಿಜೆಪಿ ಮುಖಂಡ ಶ್ರೀಕಾಂತ ದುಂಡಿಗೌಡ್ರನ್ನ ಅಮಾನತುಗೊಳಿಸಲಾಗಿತ್ತು. ಈಗ ಸಂಸದ ಬಸವರಾಜ ಬೊಮ್ಮಾಯಿ ವಿರುದ್ಧವೇ ತಿರುಗಿ ಬಿದ್ದಿರೋ ಬಿಜೆಪಿ ಮುಖಂಡರು, ಬಸವರಾಜ ಬೊಮ್ಮಾಯಿ ವಿರುದ್ಧವೇ ದೂರು ನೀಡಲು ಮಂದಾಗಿದ್ದಾರೆ.
ರಾಜ್ಯ ಬಿಜೆಪಿಯಲ್ಲಿ ಬಂಡಾಯದ ಬಿಸಿ ಹೆಚ್ಚಾಗಿದ್ದು, ಒಂದೆಡೆ ರೆಬೆಲ್ ಟೀಂ ವಿಜಯೆಂದ್ರಗೆ ಟಕ್ಕರ್ ಕೊಟ್ಟರೆ ಮತ್ತೊಂದೆಡೆ ಮಾಜಿ ಸಿಎಂ, ಸಂಸದ ಬಸವರಾಜ್ ಬೊಮ್ಮಾಯಿ ವಿರುದ್ದ ಆಕ್ರೋಶ ಭುಗಿಲೆದ್ದಿದೆ. ಆದರೆ ಬೊಮ್ಮಾಯಿ ವಿರುದ್ದ ತಿರುಗಿ ಬಿದ್ದಿರುವುದು ಯತ್ನಾಳ್ ಟೀಂ ಅಲ್ಲ. ಸಂಸದ ಬೊಮ್ಮಾಯಿ ವಿರುದ್ದ ಸ್ವಕ್ಷೇತ್ರದಲ್ಲೆ ಆಕ್ರೋಶ ಶುರುವಾಗಿದೆ. ಸಂಸದ ಬಸವರಾಜ ಬೊಮ್ಮಾಯಿ ವಿರುದ್ದ ಹೈಕಮಾಂಡ್ ಗೆ ದೂರು ಸಲ್ಲಿಕೆಯಾಗಿದೆ. ಬಿಜೆಪಿ ನಾಯಕ ಶ್ರೀಕಾಂತ ದುಂಡಿಗೌಡ್ರ ಅಮಾನತು ಖಂಡಿಸಿ ಬಿಜೆಪಿ ಹೈಕಮಾಂಡ್ಗೆ ದೂರು ಸಲ್ಲಿಕೆ ಮಾಡಲಿದ್ದಾರೆ.
ಪಕ್ಷ ವಿರೋಧಿ ಚಟುವಟಿಕೆ ಹಿನ್ನಲೆಯಲ್ಲಿ ದುಂಡಿಗೌಡ್ರ ಅಮಾನತು ಮಾಡಲಾಗಿತ್ತು. ಭರತ ಬೊಮ್ಮಾಯಿ ಸೋಲಿನ ನಂತರ ದುಂಡಿಗೌಡ್ರ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಅಮಾನತು ಪ್ರಶ್ನಿಸಿ ಹೈಕಮಾಂಡ್ & ಪ್ರಧಾನಿ ನರೇಂದ್ರ ಮೋದಿ ಭೇಟಿಗೆ ಸಜ್ಜಾಗಿದೆ ಶಿಗ್ಗಾಂವಿ ನಾಯಕರ ಟೀಂ. ಇದರ ಜೊತೆಗೆ ಬೊಮ್ಮಾಯಿ ಸೋಲಿನ ವಿವರ ಕೂಡ ಹೈಕಮಾಂಡ್ ಗೆ ನೀಡಲು ಚಿಂತನೆ ನಡೆಸಿದ್ದಾರೆ. ಬೊಮ್ಮಾಯಿ ಸ್ವಪ್ರತಿಷ್ಠೆ, ಕುಟುಂಬ ರಾಜಕಾರಣದ ಬಗ್ಗೆ ವರದಿ ಸಲ್ಲಿಕೆ ಮಾಡಲಿದ್ದಾರೆ.