ಶಿಗ್ಗಾಂವಿ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಸಿಎಂ, ಸಂಸದ ಬಸವರಾಜ್ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ ಅವರು ನೆನ್ನೆ ನಾಮಪತ್ರ ಸಲ್ಲಿಸಿದರು. ಇಂದು ಬೃಹತ್ ರೋಡ್ ಶೋ ಮೂಲಕ ಮತ್ತೊಮ್ಮೆ ನಾಮಪತ್ರ ಸಲ್ಲಿಸಲಿದ್ದಾರೆ. ಆದರೆ ನೆನ್ನೆ ಒಳ್ಳೆ ಮುಹೂರ್ತ ಇದ್ದ ಕಾರಣ ಸಾಂಕೇತಿಕವಾಗಿ ಕುಟುಂಬ ಸಮೇತರಾಗಿ ತಹಶಿಲ್ದಾರ್ ಕಚೇರಿಗೆ ಆಗಮಿಸಿ ಚುನಾವಣಾ ಅಧಿಕಾರಿ ಮಹಮ್ಮದ್ ಖಿಝರ್ಗೆ ನಾಮಪತ್ರವನ್ನ ಸಲ್ಲಿಸಿದರು. ಇನ್ನು ನಾಮಪತ್ರದಲ್ಲಿ ತಮ್ಮ ಒಟ್ಟು ಆಸ್ತಿಯನ್ನು ಉಲ್ಲೇಖಿಸಿದ್ದು, ಯುವ ಉದ್ಯಮಿಯಾಗಿರುವ ಭರತ್ ಬೊಮ್ಮಾಯಿ 16.17 ಕೋಟಿ ರೂಪಾಯಿ ಆಸ್ತಿ ಒಡೆಯರಾಗಿದ್ದಾರೆ.
ಇದನ್ನೂ ಓದಿ: ಶಿಗ್ಗಾಂವಿಗೆ ಯಾಸಿರ್ ಪಠಾಣ್ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆ: ಸಿಎಂ
ಭರತ್ ಬೊಮ್ಮಾಯಿ ಆಸ್ತಿ ಎಷ್ಟು?
- ಭರತ್ ಬೊಮ್ಮಾಯಿ ಒಟ್ಟು ಆಸ್ತಿ ಮೌಲ್ಯ 16.17 ಕೋಟಿ ರುಪಾಯಿ, ಅದರಲ್ಲಿ 3.79 ಕೋಟಿ ರುಪಾಯಿ ಚರಾಸ್ತಿ ಮತ್ತು 5.50 ಕೋಟಿ ರುಪಾಯಿ ಸ್ಥಿರಾಸ್ತಿ ಹೊಂದಿದ್ದಾರೆ.
- ವಿವಿಧ ಬ್ಯಾಂಕ್ಗಳಲ್ಲಿ 2.03 ಲಕ್ಷ ರುಪಾಯಿ ಮತ್ತು ಹಣಕಾಸು ಸಂಸ್ಥೆಗಳಲ್ಲಿ 4.05 ಲಕ್ಷ ರುಪಾಯಿ ನಿಶ್ಚಿತ ಠೇವಣಿ ಇಟ್ಟಿದ್ದಾರೆ.
- ಉಳಿತಾಯ ಖಾತೆಗಳಲ್ಲಿ 1.19 ಕೋಟಿ ರುಪಾಯಿ ಹೊಂದಿದ್ದಾರೆ.
- ಸಾರ್ವಜನಿಕ ಕಂಪನಿಗಳಲ್ಲಿ 1.74 ಲಕ್ಷ ರುಪಾಯಿ ಮತ್ತು ಖಾಸಗಿ ಕಂಪನಿಗಳಲ್ಲಿ 50,000 ರುಪಾಯಿ ಬಂಡವಾಳ ಹೂಡಿಕೆ ಮಾಡಿದ್ದಾರೆ.
- ಪಾಲುದಾರಿಕೆಯಲ್ಲಿ 1.23 ಕೋಟಿ ರೂಪಾಯಿ ಬಂಡವಾಳ
- ಗೋಲ್ಡ್ ಚಿಟ್ ಫಂಡ್ನಲ್ಲಿ 70 ಸಾವಿರ ರುಪಾಯಿ ಮತ್ತು ಮ್ಯೂಚುವಲ್ ಫಂಡ್ನಲ್ಲಿ 10.20 ಲಕ್ಷ ರುಪಾಯಿ ಹೂಡಿಕೆ ಮಾಡಿದ್ದಾರೆ.
- 81.61 ಲಕ್ಷ ರುಪಾಯಿ ಮೌಲ್ಯದ ಚಿನ್ನಾಭರಣ ಹೊಂದಿದ್ದಾರೆ.
- ಬೆಂಗಳೂರಿನ ಆರ್.ಟಿ.ನಗರದಲ್ಲಿ ಒಂದು ವಾಸದ ಮನೆ, ಸೆಂಚುರಿ ಎಥೋಸ್ ಅಪಾರ್ಟ್ಮೆಂಟ್ನಲ್ಲಿ ಫ್ಲ್ಯಾಟ್, ಭರತ್ ಬೊಮ್ಮಾಯಿ ಪತ್ನಿ ಇಬ್ಬನಿ ಬಳಿ 1.43 ಲಕ್ಷ ರುಪಾಯಿ ಹಣವಿದೆ. ಬೆಂಗಳೂರಿನ ತಾವರೆಕೆರೆ ಹೋಬಳಿ ಅಜ್ಜನಹಳ್ಳಿಯಲ್ಲಿ 1 ಸೈಟ್, ಕೆಂಗೇರಿಯಲ್ಲಿ ಕೆಹೆಚ್ಡಿ ಸೈಟ್ ಹೊಂದಿದ್ದಾರೆ.