ಕರ್ನಾಟಕದಲ್ಲಿ ಕೆಲಸ ಮಾಡಲು ಕನ್ನಡ ಭಾಷೆ ಓದಲು ಹಾಗೂ ಬರೆಯಲು ಬರಬೇಕು ಎಂಬುದು ಎಲ್ಲಾ ಕನ್ನಡಿಗರ ಮನದಾಸೆ. ಈ ಆಸೆನ ಈಡೇರಿಸಲು ಕನ್ನಡಪರ ಸಂಘಟನೆಗಳು ಮುಂದಾಗಿವೆ. ಹೌದು.. ಬಿಬಿಎಂಪಿ ಪೌರಕಾರ್ಮಿಕರ ನೇಮಕಾತಿಯಲ್ಲಿ ಕನ್ನಡಕ್ಕೆ ಆದ್ಯತೆ ಕೊಡಬೇಕು ಎಂದು ಒತ್ತಾಯಿಸಿದ್ದಾರೆ. 11500 ಹುದ್ದೆಗಳ ನೇಮಕಾತಿಗೆ ಬಿಬಿಎಂಪಿ ಸಿದ್ದತೆ ನಡೆಸಿದೆ.
ನೇಮಕಾತಿ ನಡೆಯುವಾಗ 80% ಕನ್ನಡವನ್ನು ಸ್ಪಷ್ಟವಾಗಿ ಬರುವ ವ್ಯಕ್ತಿಗೆ ಹುದ್ದೆ ನೀಡಬೇಕು, ಕನ್ನಡ ಚೆನ್ನಾಗಿ ಮಾತನಾಡುವುದನ್ನ ಪರೀಕ್ಷಿಸಲು ಕನ್ನಡ ಪದ್ಯಾಪಕರನ್ನು ನೇಮಕ ಮಾಡಬೇಕು, ಐದು ನಿಮಿಷಗಳ ಕಾಲ ವಿಡಿಯೋ ಸಂದರ್ಶನ ಮಾಡಬೇಕು, ಇದರಲ್ಲಿ ಯಾರು ಸ್ಪಷ್ಟವಾಗಿ ಕನ್ನಡ ಮಾತಾಡ್ತಾರೆ ಅವರಿಗೆ ಹುದ್ದೆ ನೀಡಬೇಕು ಎಂದು BBMP ಕಮಿಷನರ್ಗೆ ಕನ್ನಡ ಪರ ಸಂಘಟನೆಗಳು ಮನವಿ ಸಲ್ಲಿಸಿದ್ದಾರೆ. ಅಕಸ್ಮಾತ್ ಮತ್ತೆ ಹೊರ ರಾಜ್ಯದವರಿಗೆ ಮಣೆ ಹಾಕಿದ್ರೆ ಉಗ್ರ ಹೋರಾಟದ ಎಚ್ಚರಿಕೆಯನ್ನ ಕನ್ನಡ ಪರ ಸಂಘಟನೆಗಳು ನೀಡಿವೆ.