ಅಕ್ಟೋಬರ್ 3ರಿಂದ 20ರವರೆಗೆ ನಿಗದಿಯಾಗಿರುವ ಮಹಿಳೆಯರ ಟಿ20 ವಿಶ್ವಕಪ್, ಬಾಂಗ್ಲಾದೇಶದಲ್ಲಿನ ಹಿಂಸಾಚಾರ, ಭದ್ರತಾ ಭೀತಿಯಿಂದಾಗಿ ಅದರ ಕೈತಪ್ಪುವ ಸಾಧ್ಯತೆಯ ನಡುವೆ, ಭಾರತ ಈ ಟೂರ್ನಿಯ ಆತಿಥ್ಯ ವಹಿಸಿಕೊಳ್ಳಲು ನಿರಾಕರಿಸಿದೆ. ಐಸಿಸಿ ಈಗಾಗಲೆ ಆಫರ್ ನೀಡಿದ್ದರೂ, ನಾವು ಅದನ್ನು ಒಪ್ಪಿಕೊಂಡಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಷಾ ತಿಳಿಸಿದ್ದಾರೆ. ಮುಂದಿನ ವರ್ಷದ ಮಹಿಳೆಯರ ಏಕದಿನ ವಿಶ್ವಕಪ್ ಆತಿಥ್ಯ ಈಗಾಗಲೆ ನಮ್ಮ ಕೈಯಲ್ಲಿದೆ. ಹೀಗಾಗಿ ಸತತ 2 ವಿಶ್ವಕಪ್ ಆಯೋಜಿಸಲು ನಾವು ಸಿದ್ಧರಿಲ್ಲ ಎಂದಿದ್ದಾರೆ.