ವಯಸ್ಸು ಆಗುತ್ತಿದ್ದಂತೆ ಮುಖದಲ್ಲಿ ನೆರಿಗೆಗಳು ಮೂಡುವುದು ಸಾಮಾನ್ಯ. ಇದಕ್ಕೆ ಪ್ರಮುಖ ಕಾರಣ ಬಿಸಿಲಿನ ಅತಿನೇರಳೆ ಕಿರಣಗಳು. ಬಿಸಿಲಿನ ಕಿರಣಗಳಿಂದ ರಕ್ಷಿಸಲು ಮನೆಮದ್ದು ಸಹಕಾರಿಯಾಗಿವೆ. ಮುಖದಲ್ಲಿ ಮೂಡಿರುವ ನೆರಿಗೆಗಳನ್ನು ನಿವಾರಿಸಲು ಕೆಲವು ಮನೆಮದ್ದುಗಳನ್ನು ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದು. ಇವು ಸರಳ ಹಾಗೂ ಸುಲಭವಾಗಿ ಲಭ್ಯವಿರುವ ಸಾಮಾಗ್ರಿಯಿಂದಲೇ ತಯಾರಿ ಮಾಡಿಕೊಳ್ಳಬಹುದು. ಮುಖದಲ್ಲಿ ನೆರಿಗೆ ಮೂಡುವುದು ಸ್ವಾಭಾವಿಕ ಆದರೆ ಸಣ್ಣ ವಯಸ್ಸಿನಲ್ಲಿಯೇ ಈ ರೀತಿ ಸಮಸ್ಯೆ ಕಂಡು ಬಂದರೆ, ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ…
1.ಮೊಟ್ಟೆಯ ಬಿಳಿಭಾಗದ ಪ್ರೋಟೀನ್ ತ್ವಚೆಯ ಸೆಳೆತವನ್ನು ಹೆಚ್ಚಿಸಿ ಬಿಗಿಗೊಳಿಸುವ ಮೂಲಕ ನೆರಿಗೆಗಳನ್ನು ನಿವಾರಿಸುತ್ತದೆ.
2. ಲಿಂಬೆಯಲ್ಲಿರುವ ವಿಟಮಿನ್ ಸಿ ದೇಹ ಕೊಲ್ಯಾಜೆನ್ ಉತ್ಪಾದನೆಯನ್ನು ಹೆಚ್ಚಿಸಲು ನೆರವಾಗುತ್ತೆ. ಹಾಗೂ ತ್ವಚೆ ಹೆಚ್ಚು ಬಿಗಿದುಕೊಳ್ಳಲು, ಆರೋಗ್ಯಕರವಾಗಿರಲು ನೆರವಾಗುತ್ತೆ.
3. ಕ್ಯಾರೆಟ್ನಲ್ಲಿರುವ ಪೋಷಕಾಂಶಗಳು ತ್ವಚೆಗೆ ಅಗತ್ಯವಿರುವ ಪೋಷಣೆ ಒದಗಿಸುತ್ತೆ. ಕಲ್ಮಶಗಳನ್ನು ನಿವಾರಿಸಿ, ನೀರಿನ ಸಂಗ್ರಹವನ್ನು ತಡೆದು ಚರ್ಮದ ಬಿಗಿತನವನ್ನು ಹೆಚ್ಚಿಸುತ್ತದೆ.
4. ಬಾದಾಮಿ ತೈಲದಲ್ಲಿರುವ ವಿಟಮಿನ್ ಇ ತ್ವಚೆಯಲ್ಲಿರುವ ಕೊಲ್ಯಾಜೆನ್ನ ನಷ್ಟವಾಗುವಿಕೆಯನ್ನು ತಡೆಯುತ್ತದೆ. ಚರ್ಮದಲ್ಲಿ ಹೊಸ ಜೀವಕೋಶಗಳ ಬೆಳವಣಿಗೆಗ ನೆರವಾಗುತ್ತೆ.
5. ಸೌತೆಕಾಯಿಯಲ್ಲಿ ಮುಖದ ನೆರಿಗೆಗಳನ್ನು ಇಲ್ಲವಾಗಿಸಲು ನೆರವಾಗುವ ವಿಟಮಿನ್ ಸಿ ನಂತಹ ಪ್ರಬಲ ಆಂಟಿ ಆಕ್ಸಿಡೆಂಟ್ಗಳಿವೆ.
6. ಪಪ್ಪಾಯಿಯಲ್ಲಿರುವ ಪಪಾಯಿನ್ ಎಂಬ ಕಿಣ್ವ ತ್ವಚೆಯ ಹೊರಪದರಕ್ಕೆ ಅಂಟಿಕೊಂಡಿರುವ ಸತ್ತ ಜೀವಕೋಶಗಳನ್ನು ನಿವಾರಿಸುವ ಗುಣವನ್ನು ಹೊಂದಿದೆ.
7. ಸೇಬಿನಲ್ಲಿರುವ ವಿಟಮಿನ್ ಎ ಸಿ ಮತ್ತು ಇ ಮೊದಲಾದವು ತ್ವಚೆಯ ಸೆಳೆತವನ್ನು ಹೆಚ್ಚಿಸಿ ನವ ತಾರುಣ್ಯವನ್ನು ನೀಡುತ್ತದೆ.