ರಾಜ್ಯ ಸರ್ಕಾರ ನಿನ್ನೆಯಿಂದ ಪ್ರೀಮಿಯಂ ವಿಸ್ಕಿ, ಸ್ಕಾಚ್ಗಳ ದರವನ್ನು ಕಡಿಮೆ ಮಾಡಲು ಮುಂದಾಗಿದೆ. ಇತಿಹಾಸದಲ್ಲಿ ಇದೆ ಮೊದಲ ಬಾರಿಗೆ ಸ್ಕಾಚ್ ಗಳದರ ಇಷ್ಟು ಪ್ರಮಾಣದಲ್ಲಿ ಇಳಿಕೆಯಾಗ್ತಿರೋದು. ಮದ್ಯದಲ್ಲಿ 16 ಸ್ಲ್ಯಾಬ್ಗಳಿವೆ. ಅದರಲ್ಲಿ ಒಂದರಿಂದ ಐದು ಸ್ಲ್ಯಾಬ್ಗಳ ವರೆಗೆ ಮದ್ಯದ ದರವನ್ನು ಕಡಿಮೆ ಮಾಡಿಲ್ಲ.
ಅದು ಬಡ ವರ್ಗದ ಮದ್ಯಪ್ರಿಯರು ಕುಡಿಯುವ ಮದ್ಯ. 60% ರಷ್ಟು ಮದ್ಯಪ್ರಿಯರು ಈ ವರ್ಗದ ಮದ್ಯವನ್ನು ಕುಡಿಯುತ್ತಾರೆ. 6 ರಿಂದ 18 ರವರೆಗೆ ಮಧ್ಯಮವರ್ಗ, ಶ್ರೀಮಂತ ಮತ್ತು ಅತಿ ಶ್ರೀಮಂತ ವರ್ಗ ಕುಡಿಯುತ್ತಾರೆ. ಪ್ರೀಮಿಯಂ ಮದ್ಯವನ್ನು ರಾಜ್ಯದಲ್ಲಿ ಶೇ40% ರಷ್ಟು ಮದ್ಯಪ್ರಿಯರು ಕುಡಿಯುತ್ತಾರೆ. ಆರರಿಂದ ಹದಿನಾರರವರೆಗೆ ಬರುವ ಎಲ್ಲಾ ಮಾದರಿಯ ಮದ್ಯದ ದರವನ್ನು ಕಡಿಮೆ ಮಾಡಲಾಗ್ತಿದೆ.
ಇನ್ನೂ ಇತ್ತ ರಾಜ್ಯ ಸರ್ಕಾರ ನಾರ್ಮಲ್ ಜನರು ಕುಡಿಯುವ ಪ್ರತಿ ಬಿಯರ್ ಮೇಲೆ 5 ರಿಂದ 30 ರುಪಾಯಿ ವರೆಗೂ ಹೆಚ್ಚಳ ಮಾಡಿದೆ. ಈ ಹಿಂದೆ 100 ರುಪಾಯಿ ಇದ್ದ ಬಿಯರ್ ಈಗ 120 ರುಪಾಯಿ. 120 ರುಪಾಯಿ ಇದ್ದ ಬಿಯರ್ 150 ರುಪಾಯಿ. 130 ರುಪಾಯಿ ಇದ್ದ ಬಿಯರ್ ಬೆಲೆ 150 ರುಪಾಯಿ ವರೆಗೆ ಏರಿಕೆ ಮಾಡಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮದ್ಯಪ್ರಿಯರು ರಾಜ್ಯ ಸರ್ಕಾರ ಸ್ಕಾಚ್ ದರ ಕಡಿಮೆ ಮಾಡಿರುವುದು ಸಂತೋಷದ ವಿಚಾರ ಆದರೆ ಬಿಯರ್ ಈಗಾಗಲೇ ಮೂರು ಬಾರಿ ಹೆಚ್ಚಳ ಮಾಡಿದ್ರು. ಈಗ ಮತ್ತೆ ದರ ಹೆಚ್ಚಳ ಮಾಡಿರುವುದು ಸರಿಯಲ್ಲ ಎಂದು ಅಸಮಾಧಾನ ಹೊರ ಹಾಕಿದ್ದಾರೆ.