ಬೆಳಗಾವಿ: ವಿಧಾನಸಭೆಯಲ್ಲಿ ಮಾಜಿ ಸಿಎಂ ದಿವಂಗತ ಎಸ್. ಎಂ. ಕೃಷ್ಣ ಅವರಿಗೆ ತಾವು ಸಂತಾಪ ಸೂಚಿಸಿ ನಿನ್ನೆ ಮಾತನಾಡುವಾಗ ವಡ್ಡ ಪದ ಬಳಸಿದ್ದರಿಂದ ಯಾರಿಗಾದರೂ ನೋವಾಗಿದ್ದಾರೆ ವಿಷಾದ ವ್ಯಕ್ತಪಡಿಸುವುದಾಗಿ ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.
ಭೋವಿ ಸಮುದಾಯದ ಬಗ್ಗೆ ತಮಗೆ ಅಪಾರ ಗೌರವವಿದೆ. ನನ್ನನ್ನು ನಾನೇ ಟೀಕೆ ಮಾಡಿಕೊಳ್ಳುವ ಬರದಲ್ಲಿ ಆ ಪದ ಬಳಸಿದ್ದೇಯೇ ಹೊರತು ಯಾರಿಗೂ ನೋವು ಉಂಟು ಮಾಡುವ ಉದ್ದೇಶದಿಂದ ಅಲ್ಲ ಎಂದು ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.