ಸರಕಾರಿ ಕೆಲಸ ಅಂದ್ರೆ ದೇವರ ಕೆಲಸ ಅನ್ನುತ್ತಾರೆ. ಅಂತಹ ಹುದ್ದೆಯಲ್ಲಿ ಇದ್ದುಕೊಂಡ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗದೆ ಜನರನ್ನು ಗಂಟೆಗಟ್ಟಲೇ ಕಾಯಿಸುತ್ತಾರೆ. ಪ್ರತೀ ನಿತ್ಯ ಜನರ ಪರದಾಡುತಿದ್ರೆ, ಅಧಿಕಾರಿಗಳಿಗೆ ಮಾತ್ರ ಚೆಲ್ಲಟವಾಗಿದೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಹೊರವಲದಲ್ಲಿರುವ ಪ್ರಾದೇಶಿಕ ಸಾರಿಗೆ ಕಚೇರಿಯ ಪ್ರತಿ ದಿನದ ಕಥೆಯಿದು. ಪಟ್ಟಣದ ಹೊರವಲಯದಲ್ಲಿರುವ ಈ ಕಚೇರಿಗೆ ವೆಹಿಕಲ್ಸ್ ಪಾಸಿಂಗ್, ಡ್ರೈವಿಂಗ್ ಲೈಸೆನ್ಸ್ ಸೇರಿದಂತೆ ಇನ್ನಿತರ ಕೆಲಸಗಳನ್ನು ಹೊತ್ತು ಪ್ರತಿ ನಿತ್ಯ ನೂರಾರು ಜನರು ಆಗಮಿಸುತ್ತಾರೆ. ಆದ್ರೆ ಕಚೇರಿಗೆ ಅಧಿಕಾರಿಗಳು ಮಾತ್ರ ಸರಿಯಾದ ಸಮಯಕ್ಕೆ ಕರ್ತವ್ಯಕ್ಕೆ ಹಾಜರಿರೋದೆ ಇಲ್ಲ. ಬೆಳಿಗ್ಗೆ 10 ಗಂಟೆಗೆ ಸರ್ಕಾರಿ ಸೇರಿದಂತೆ ಎಲ್ಲ ಕಚೇರಿಗಳ ಕಾರ್ಯಗಳು ಶುರುವಾಗುತ್ತವೆ.ಆದರೆ ಈ ಇಲಾಖೆಯ ಅಧಿಕಾರಿಗಳು ಮಾತ್ರ 12 ಗಂಟೆಯಾದರೂ ಕಛೇರಿಯ ಗೇಟ್ ಸಹ ಓಪನ್ ಮಾಡಿರುವುದಿಲ್ಲ. ಕೆಲಸ ನಿಮಿತ್ತ ದೂರದ ಊರುಗಳಿಂದ ಜನರು ಬೆಳಿಗ್ಗೆ 10 ಗಂಟೆಗೆ ಈ ಕಚೇರಿಗೆ ಆಗಮಿಸುತ್ತಾರೆ. ಆದ್ರೆ ನಿಗದಿತ ಸಮಯಕ್ಕೆ ಕಚೇರಿಯ ಬೀಗ ಮಾತ್ರ ಓಪನ್ ಇರೋದಿಲ್ಲ. ಇದರಿಂದ ಜನರು ಮರಳಿ ಮನೆಗೂ ಹೋಗ ಬೇಕಾಗಿದೆ. ಅಧಿಕಾರಿಗಳು ಬರುವ ದಾರಿ ಕಾಯುತ್ತಾ ಇಲಾಖೆ ಗೇಟ್ ಮುಂದೆ ತಾಸುಗಟ್ಟೆಲೇ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇನ್ನಾದರೂ ಮೇಲಾಧಿಕಾರಿಗಳು ಇವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಿ ಎಚ್ಚರಿಸುವಂತೆ ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.