ಬೆಳಗಾವಿ : ಬಿರು ಬೇಸಿಗೆಯಲ್ಲೂ ಸುಪ್ರಸಿದ್ಧ ಗೋಕಾಕ್ ಫಾಲ್ಸ್ನಲ್ಲಿ ಜಲವೈಭವ ಸೃಷ್ಟಿಯಾಗಿದೆ. ಮಳೆಗಾಲದಲ್ಲಿ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುವ ಫಾಲ್ಸ್ ಈಗ ಬೇಸಿಗೆಯಲ್ಲೂ ಧುಮ್ಮಿಕ್ಕುತ್ತಿದೆ. ಹುಕ್ಕೇರಿ ತಾಲೂಕಿನ ಹಿಡಕಂ ಡ್ಯಾಂನಲ್ಲಿರುವ ಘಟಪ್ರಭಾ ಜಲಾಶಯ ಧುಮ್ಮಕ್ಕಿ ಹರಿಯುತ್ತಿದೆ.
ಘಟಪ್ರಭಾ ನದಿಪಾತ್ರದ ಜನರಿಗೆ ಕುಡಿಯುವ ನೀರಿಗೆ ಅನುಕೂಲ ಕಲ್ಪಿಸಲು ಘಟಪ್ರಭಾ ಜಲಾಶಯದಿಂದ ನೀರು ಬಿಡುಗಡೆ ಮಾಡಲಾಗಿದೆ. ಕಳೆದ ಮೂರು ದಿನಗಳಿಂದ ಹಂತಹಂತವಾಗಿ ಒಂದೂವರೆ ಟಿಎಂಸಿ ನೀರು ಬಿಡುಗಡೆ ಮಾಡಲಾಗಿದ್ದು, ದೊಡ್ಡ ಪ್ರಮಾಣದಲ್ಲಿ ನಿತ್ಯ ನೀರು ಬಿಡುಗಡೆ ಆಗ್ತಿರುವ ಕಾರಣಕ್ಕೆ ಗೋಕಾಕ್ ಫಾಲ್ಸ್ನಲ್ಲಿ ಜಲವೈಭವ ಸೃಷ್ಠಿಯಾಗಿದೆ.
180 ಅಡಿ ನೀರು ಧುಮ್ಮುಕ್ಕುವ ಈ ಜಲಪಾತ ಕಣ್ತುಂಬಿಕೊಳ್ಳಲು ಪ್ರವಾಸಿಗರು ನೆರೆದಿದ್ದಾರೆ. ಭಾರತದ ನಯಾಗರ ಜಲಪಾತ ಎಂದೇ ಗೋಕಾಕ ಜಲಪಾತ ಫೇಮಸ್ ಆಗಿದೆ.