ಮಹಾತ್ಮ ಗಾಂಧೀಜಿ ಅವರು ಅಧ್ಯಕ್ಷತೆ ವಹಿಸಿದ್ದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಸಂಭ್ರಮ ಬೆಳಗಾವಿಯಲ್ಲಿ ಬಹಳ ಅದ್ದೂರಿಯಾಗಿ ನಡೆಯುತ್ತಿದೆ. ಎಲ್ಲಿ ನೋಡಿದರೂ ಕಾಂಗ್ರೆಸ್ ಭಾವುಟಗಳು, ನಾಯಕರ ಫ್ಲೆಕ್ಸ್ಗಳು ಸಿಟಿ ತುಂಬಾ ರಾರಾಜಿಸುತ್ತಿವೆ. ಈಗ ಆಗಿರುವ ವಿವಾದ ಏನೆಂದರೆ ಕಾಂಗ್ರೆಸ್ ನಾಯಕರು ಹಾಕಿರುವ ಫ್ಲೆಕ್ಸ್ನಲ್ಲಿ ಭಾರತ ಮುಕುಟವೇ ಮಾಯವಾಗಿದೆ.
ಬೆಳಗಾವಿಯಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಮಹಾ ಅಧಿವೇಶನದಲ್ಲಿ ನಾಯಕರು ಹಾಕಿಕೊಂಡಿರುವ ಫ್ಲೆಕ್ಸ್ ನಲ್ಲಿ ಭಾರೀ ಯಡವಟ್ಟನ್ನ ಮಾಡಿದ್ದಾರೆ. ಭಾರತ ದೇಶದ ಭೂಪಟವನ್ನ ವಿರೂಪಗೊಳಿಸಿರುವ ಫೋಟೋ ಎಲ್ಲೆಡೆ ಸಖತ್ ವೈರಲ್ ಆಗುತ್ತಿದೆ. ಸ್ವಾತಂತ್ರ್ಯ ಕ್ಕಾಗಿ ಹೋರಾಟ ಮಾಡಿದ ಮಹಾತ್ಮ ಗಾಂಧೀಜಿ ಅವರ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಸಮಾರಂಭದಲ್ಲಿಯೇ ಈ ರೀತಿಯ ಒಂದು ಬೆಳವಣಿಗೆಗೆ ಬಿಜೆಪಿ ಕಿಡಿ ಕಾರಿದೆ.
ಅಧಿವೇಶನದ ಸ್ವಾಗತಕ್ಕೆ ಬಳಸಿದ ಫ್ಲೆಕ್ಸ್ ನಲ್ಲಿ ಭಾರತದ ಮುಕುಟವನ್ನೆ ತಗೆದುಹಾಕಿದ್ದಾರೆ, ಬೆಳಗಾವಿಯ ಅಧಿವೇಶನದ ಪೆಕ್ಸ್ನಲ್ಲಿ ಸಿಯಾಚೀನ್, ಎಲ್ ಓಸಿಯನ್ನ ಪಾಕಿಸ್ತಾನಕ್ಕೆ ಬಿಟ್ಟು ಕೊಟ್ಟಂತೆ ಕಾಣುತ್ತೆ, ದೇಶದ ಒಂದಿಂಚೂ ಜಾಗವನ್ನು ಸಹ ಪಾಕಿಸ್ತಾನ, ಚೀನಾಗೆ ಬಿಟ್ಟುಕೊಡಲ್ಲ ಅಂತಾ ಮೋದಿ ಹೇಳಿದ್ದಾರೆ. ಆದ್ರೆ ದುಷ್ಟ ಕಾಂಗ್ರೆಸ್ ನವರು ಭಾರತದ ನಕ್ಷೆಯಲ್ಲಿ ದೇಶಕ್ಕೆ ಅನ್ಯಾಯ ಮಾಡಿದ್ದಾರೆ. ಕಾಂಗ್ರೆಸ್ ಗೆ ದೇಶದ ಬದ್ದತೆ, ಅಖಂಡತೆಯ ಬಗ್ಗೆ ಇರುವ ನಿಲುವು ಇದರಲ್ಲೇ ಗೊತ್ತಾಗುತ್ತೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಮಿತ್ರ ಪಕ್ಷವಾದ ಜೆಡಿಎಸ್ ಕೂಡ ಕಾಂಗ್ರೆಸ್ ವಿರುದ್ದ ಕಿಡಿಕಾರಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣವಾದ ಎಕ್ಸ್ನಲ್ಲಿ ಟ್ವೀಟ್ ಮಾಡಿರುವ ಜೆಡಿಎಸ್ ಪಾರ್ಟಿ ಬೆಳಗಾವಿಯಲ್ಲಿ “ಗಾಂಧಿ ಭಾರತ” ಹೆಸರಿನಲ್ಲಿ ಹಾಕಿಸಿರುವ ಭಾರತದ ನಕ್ಷೆಯಲ್ಲಿ ಕಾಶ್ಮೀರ ಭೂಭಾಗವನ್ನೇ ಕೈಬಿಟ್ಟಿದೆ ಇಟಲಿ ಕಾಂಗ್ರೆಸ್ ಎಂದು ಆಕ್ರೋಶ ಹೊರಹಾಕಿದ್ದಾರೆ.
ಭಾರತದ ನಕ್ಷೆಯನ್ನು ತಿರುಚುವುದು, ಮಾರ್ಪಾಡು ಮಾಡುವುದು ದೇಶದ್ರೋಹದಂತಹ ಗಂಭೀರ ಅಪರಾಧಿ ಕೃತ್ಯ. ಸಮಾವೇಶದ ನೇತೃತ್ವ ವಹಿಸಿರುವ ಕೆಪಿಸಿಸಿ ಅಧ್ಯಕ್ಷ ಡಿಸಿಎಂ ಡಿಕೆ ಶಿವಕುಮಾರ್ ಅವರೇ ಇದಕ್ಕೆ ನೇರ ಹೊಣೆಗಾರರು. ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಆದರೆ ವೋಟಿಗಾಗಿ ಓಲೈಕೆ ರಾಜಕಾರಣ ಮಾಡುತ್ತ ಪಾಕಿಸ್ತಾನಕ್ಕೆ ಬೆಂಬಲ ವ್ಯಕ್ತಪಡಿಸುವ ಕಾಂಗ್ರೆಸ್ ಸರ್ಕಾರ ದೇಶದ್ರೋಹದ ಮನಸ್ಥಿತಿ ಬ್ಯಾನರ್ ಗಳಿಂದ ಜಗಜ್ಜಾಹೀರಾಗಿದೆ ಎಂದು ಜೆಡಿಎಸ್ ತನ್ನ ಟ್ವೀಟ್ನಲ್ಲಿ ಕಾಂಗ್ರೆಸ್ ವಿರುದ್ದ ಕಿಡಿಕಾರಿದ್ದಾರೆ.