- ಪುದುಚೇರಿ- ದಾದರ್ ರೈಲಿನಲ್ಲಿ ಟಿಸಿ ಟಿಕೆಟ್ ಕೇಳಿದ್ದಕ್ಕೆ ಒಬ್ಬ ಟಿಸಿ ಸೇರಿ ನಾಲ್ವರ ಮೇಲೆ ಹಲ್ಲೆ
- ಒಬ್ಬರು ಮೃತಪಟ್ಟಿದ್ದು ಹಲ್ಲೆ ನಡೆಸಿದ ಆರೋಪಿ ಪರಾರಿ
ಬೆಳಗಾವಿ : ಪುದುಚೇರಿ- ದಾದರ್ ರೈಲಿನಲ್ಲಿ ಟಿಸಿ ಟಿಕೆಟ್ ಕೇಳಿದ್ದಕ್ಕೆ ಒಬ್ಬ ಟಿಸಿ ಸೇರಿ ನಾಲ್ವರ ಮೇಲೆ ಮುಸುಕುದಾರಿಯೊಬ್ಬ ಚಾಕುವಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಅದರಲ್ಲಿ ಒಬ್ಬರು ಮೃತಪಟ್ಟಿದ್ದು ಹಲ್ಲೆ ನಡೆಸಿದ ಆರೋಪಿ ಪರಾರಿಯಾಗಿದ್ದಾನೆ.
ಟಿಕೆಟ್ ಚೆಕ್ ಮಾಡಲು ಬಂದ ಟಿಸಿ ಮೇಲೆ ಮುಸುಕುಧಾರಿ ಯುವಕನೊಬ್ಬ ಚಾಕುವಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು, ಆತನನ್ನು ರಕ್ಷಿಸಲು ಹೋದ ನಾಲ್ವರ ಮೇಲೂ ಮುಸುಕುಧಾರಿ ಯುವಕ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.
ಈ ವೇಳೆ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬೆಳಗಾವಿಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹತ್ಯೆಗೀಡಾದ ಯುವಕ ದೇವರ್ಷಿ ವರ್ಮಾ (24). ಇನ್ನು ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ವಿಜಿಲೆನ್ಸ್ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪರಾಧಿ ಪರಾರಿಯಾಗಿದ್ದು ಸ್ಥಳಕ್ಕೆ ಖಾನಾಪುರ ಪೊಲೀಸ್ ಇನ್ಸ್ಪೆಕ್ಟರ್ ರಾಮಚಂದ್ರ ನಾಯಕ್ ಬೆಟ್ಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.