ರಾಜ್ಯದ ಗಡಿ ಭಾಗದಲ್ಲಿ ದಿನೇ ದಿನೇ ಕಳ್ಳತನ ಹಾಗೂ ದರೋಡೆ ಪ್ರಕರಣಗಳು ಹೆಚ್ಚಾಗುತ್ತಿವೆ. ಸಾರ್ವಜನಿಕರು ಆತಂಕದಲ್ಲಿರುವ ಪರಿಸ್ಥಿತಿ ಎದುರಾಗಿದೆ. ಇತ್ತೀಚೆಗೆ ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಬಡಚಿ ಗ್ರಾಮದಲ್ಲಿ ಇಂತಹದೊಂದು ಪ್ರಕರಣ ನಡೆದಿದೆ. ತಡರಾತ್ರಿ 5 ಜನ ಅಂತರ್ ರಾಜ್ಯ ದರೋಡೆಕೋರರು ಕಾರಿನಲ್ಲಿ ಬಂದು ಕಳ್ಳತನಕ್ಕೆ ಹೊಂಚು ಹಾಕಿದ್ದರು. ಹಲವಾರು ಮಾರಕಾಸ್ತ್ರಗಳಾದ ಚಾಕು, ಏರ್ಗನ್ ಇತ್ಯಾದಿಗಳನ್ನ ಹೊತ್ತು ತಂದಿದ್ದರು ಈ ಖದೀಮರು.
ವಿಷಯ ಹೇಗೋ ಗ್ರಾಮಸ್ತರಿಗೆ ತಿಳಿದಿದ್ದು, ಖದೀಮರನ್ನ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಐವರಲ್ಲಿ 3 ಜನ ಮಾತ್ರ ಜನರ ಕೈಗೆ ಸಿಕ್ಕಿಬಿದ್ದಿದ್ದು, ಇಬ್ಬರು ಪರಾರಿಯಾಗಿದ್ದಾರೆ. ಜನರ ಕೈಗೆ ಸಿಕ್ಕಿಬಿದ್ದ 3 ಜನ ದರೋಡೆಕೋರರನ್ನ ಬಡಚಿ ಗ್ರಾಮಸ್ತರು ಐಗಳಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಮೂವರ ಬಳಿ ಇದ್ದ ಮಾರಕಸ್ತ್ರಗಳನ್ನು ಐಗಳಿ ಪೊಲೀಸರು ವಶಪಡಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.