ಸೋಮವಾರದಿಂದ ಬೆಳಗಾವಿ ಅಧಿವೇಶನ ಆರಂಭದ ಹಿನ್ನಲೆಯಲ್ಲಿ ಸಕಲ ಸಿದ್ದತೆಯೊಂದಿಗೆ ರಾಜ್ಯ ಸರ್ಕಾರ ತಯಾರಾಗಿದೆ. ಪ್ರತಿಪಕ್ಷಗಳ ಟೀಕೆಯ ಬಾಣಗಳಿಗೆ ತಿರುಗೇಟು ಕೊಡಲು ಸರ್ಕಾರ ಸಜ್ಜಾಗಿದೆ. ಬಿಜೆಪಿ ಅವಧಿಯಲ್ಲಿ ನಡೆದಿದೆ ಎನ್ನಲಾದ ಹಗರಣಗಳನ್ನ ಪ್ರಸ್ತಾಪಿಸಲು ಕೈ ಪಡೆ ತಯಾರಿ ನಡೆಸಿದೆ. ಇದರ ಜೊತೆಗೆ ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ತಾರತಮ್ಯದ ಪಟ್ಟಿಯನ್ನ ಸಿದ್ದಪಡಿಸಿದೆ ಕೈ ಪಡೆ. ಹಾಗೂ ಇಡಿ, ಸಿಬಿಐ, ಐಟಿ ದುರ್ಬಳಕೆ ಅಸ್ತ್ರ ಪ್ರಯೋಗಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಪ್ಲಾನ್ ಮಾಡಿದ್ದಾರೆ.
ಬಿಜೆಪಿ ಕಾಲದ ಹಗರಣಗಳು ಹಾಗೂ ಕೇಂದ್ರದ ತಾರತಮ್ಯದ ಪಟ್ಟಿ
- ಬಿಜೆಪಿ ಸರ್ಕಾರ ಇದ್ದಾಗ ಭೋವಿ ನಿಗಮದಲ್ಲಿ ನಡೆದಿರುವ 87 ಕೋಟಿಯ ಅಕ್ರಮ ಅವ್ಯವಹಾರ
- ಕೋವಿಡ್ 19 ಅಕ್ರಮ: ಔಷಧಿ, ಉಪಕರಣ,ಮಾಸ್ಕ್ ಖರೀದಿಯಲ್ಲಿನ ಕೋಟಿ ಕೋಟಿ ಹಣದ ಅಕ್ರಮ
- ಪಿಎಸ್ಐ ನೇಮಕಾತಿಯಲ್ಲಿನ ಅಕ್ರಮ: ಕಾಂಗ್ರೆಸ್ ಸರ್ಕಾರ ನ್ಯಾ.ಬಿ.ವೀರಪ್ಪ ನೇತೃತ್ವದಲ್ಲಿ ತನಿಖಾ ಆಯೋಗ ರಚಿಸಿದೆ
- ಕಿಯೋನಿಕ್ಸ್ ಅಕ್ರಮ: 2019-2023 ರ ಅವಧಿಯಲ್ಲಿ 400 ಕೋಟಿ ಹಗರಣದ ಆರೋಪ
- ದೇವರಾಜು ಅರಸು ಟ್ರಕ್ ಟರ್ಮಿನಲ್ಲಿ 47 ಕೋಟಿಯ ಅಕ್ರಮ: ಕಾಮಗಾರಿಗಳನ್ನೇ ಮಾಡದೇ ನಕಲಿ ಬಿಲ್ ಸೃಷ್ಟಿ ಮಾಡಿ ಮೂರು ಗುತ್ತಿಗೆ ಏಜೆನ್ಸಿಗಳಿಗೆ ಮಂಜೂರು ಮಾಡಲಾಗಿದೆ ಎಂಬ ಆರೋಪ
- ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿದ್ದ ವೇಳೆ ನಡೆಯಲಾಗಿದೆ ಎನ್ನಲಾದ ಪರಶುರಾಮ್ ಥೀಮ್ ಪಾರ್ಕ್ ಅಕ್ರಮ
- ಬಿಟ್ ಕಾಯಿನ್ ಹಗರಣ
- ಮಾಜಿ ಸಿಎಂ ಬಿಎಸ್ವೈ ಮೇಲಿನ ಬಿಡಿಎ ವಸತಿ ಯೋಜನೆಗಳಿಗೆ ಗುತ್ತಿಗೆ ನೀಡುವ ಸಲುವಾಗಿ ಲಂಚ ಸ್ವೀಕಾರ ಆರೋಪ
- ವಕ್ಛ್ ವಿಚಾರವಾಗಿ ರೈತರಿಗೆ ನೀಡಲಾದ ನೋಟಿಸ್ ಗಳು ಹೆಚ್ಚಿನವು ಬಿಜೆಪಿ ಅವಧಿಯಲ್ಲೇ ಎಂಬ ಆರೋಪ
- ಬಿಜೆಪಿ ನಾಯಕರು ಕಾಂಗ್ರೆಸ್ ಶಾಸಕರಿಗೆ ಅಪರೇಷನ್ ಕಮಲ ಮಾಡುತ್ತಿದ್ದಾರೆ ಆ ಮೂಲಕ ಸರ್ಕಾರವನ್ನ ಕೆಡವಲು ಪ್ರಯತ್ನಿಸುತ್ತಿದ್ದಾರೆ ಎಂಬ ವಿಚಾರ
- ಇಡಿ, ಸಿಬಿಐ ಹಾಗೂ ಐಟಿ ಅಧಿಕಾರಿಗಳ ದುರ್ಬಳಕೆ
- ರಾಜ್ಯಕ್ಕೆ ಬರಬೇಕಾದ ಜಿಎಸ್ಟಿ ಹಾಗೂ ನಬಾರ್ಡ್ ಸಾಲ ವಿಚಾರದಲ್ಲೂ ಕೇಂದ್ರ ತಾರತಮ್ಯ..
- ಬಿಜೆಪಿ ಸಂಸದರು, ಕೇಂದ್ರ ಸಚಿವರು ಧ್ವನಿ ಎತ್ತುತ್ತಿಲ್ಲ
- ಮಹದಾಯಿ, ಕೃಷ್ಣ ಮೇಲ್ದಂಡೆ ಯೋಜನೆ ಸಲುವಾಗಿ ಬಿಜೆಪಿ ನಾಯಕರ ಮೌನ