ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವುದರಿಂದ ನಗರದ ಕೆಲವು ರಸ್ತೆಗಳಲ್ಲಿ 30 ದಿನಗಳ ಕಾಲ ವಾಹನ ಸಂಚಾರ ನಿರ್ಬಂಧಿಸಲಾಗಿದೆ ಎಂದು ಬೆಂಗಳೂರು ಸಂಚಾರಿ ಪೊಲೀಸ್ ಮಾಧ್ಯಮ ಪ್ರಕಟಣೆ ಹೊರಡಿಸಿದೆ.
ತಾತ್ಕಾಲಿಕವಾಗಿ ಸಂಚಾರ ನಿರ್ಬಂಧಿಸಿರುವ ರಸ್ತೆಗಳ ವಿವರ:
ಕಬ್ಬನ್ಪೇಟೆ ಮುಖ್ಯ ರಸ್ತೆಯ ಅವಿನ್ಯೂ ರಸ್ತೆಯಿಂದ ಸಿದ್ದಣ್ಣ ಗಲ್ಲಿವರೆಗೆ ವಾಹನ ಸಂಚಾರ ನಿಷೇಧಿಸಲಾಗಿದೆ. ಬನ್ನಪ್ಪ ಪಾರ್ಕ್ ರಸ್ತೆಯ ಅವಿನ್ಯೂ ರಸ್ತೆಯಿಂದ 15ನೇ ಕ್ರಾಸ್ವರೆಗೆ, ವಿಲ್ ರಸ್ತೆಯ ಡಾ.ಟಿ.ಸಿ.ಎಂ ರಾಯನ್ ರಸ್ತೆ ಜಂಕ್ಷನ್ನಿಂದ ಅಕ್ಕಿಪೇಟೆ ಮುಖ್ಯ ರಸ್ತೆವರೆಗೆ, ಆರ್ಟಿ ಸ್ಟ್ರೀಟ್ನ ಬಿವಿಕೆ ಅಯ್ಯಂಗಾರ್ ರಸ್ತೆಯಿಂದ, ಅವ್ಯೆನ್ಯೂ ರಸ್ತೆವರೆಗೆ ಮತ್ತು ಬಳೆಪೇಟೆ ಮುಖ್ಯರಸ್ತೆವರೆಗೆ, ಸಿಟಿ ಸ್ಟ್ರೀಟ್ನ ದೇವರದಾಸಿಮಯ್ಯ ರಸ್ತೆಯಿಂದ ಓಟಿಸಿ ರಸ್ತೆವರೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ.