ದೇಶದ ಉದ್ಯೋಗ ಸೃಷ್ಟಿ ಕೇಂದ್ರಗಳ ಪಟ್ಟಿಯಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ರಾಜಧಾನಿ ಬೆಂಗಳೂರು ಮೊದಲ ಸ್ಥಾನ ಪಡೆದುಕೊಂಡಿದೆ. ಅಂತೆಯೇ ವೇತನ ಏರಿಕೆಯಲ್ಲೂ ಉನ್ನತ ಸ್ಥಾನ ಪಡೆದಿದೆ ಎಂದು ವರದಿಯೊಂದು ಹೇಳಿದೆ.
ಟೀಮ್ ಲೀಸ್ ಬಿಡುಗಡೆ ಮಾಡಿರುವ 2024ನೇ ಸಾಲಿನ ವರದಿ ಅನ್ವಯ, ಅತೀ ಹೆಚ್ಚಿನ ಉದ್ಯೋಗ ಸೃಷ್ಟಿಯಲ್ಲಿ ದೇಶದಲ್ಲೇ ಬೆಂಗಳೂರು ಮೊದಲ ಸ್ಥಾನದಲ್ಲಿದ್ದರೆ, ಚೆನ್ನೈ ಮತ್ತು ನವದೆಹಲಿ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದು ಕೊಂಡಿದೆ. ಇನ್ನು ಬೆಂಗಳೂರಿನಲ್ಲಿ ಉದ್ಯೋಗಿಗಳ ವಾರ್ಷಿಕ ವೇತನ ಏರಿಕೆ ಶೇ.9.3ರಷ್ಟಿದೆ. ಇದು ಕೂಡಾ ದೇಶದಲ್ಲೇ ಅತಿ ಹೆಚ್ಚಿನ ಪ್ರಮಾಣವಾಗಿದೆ.
ಇದನ್ನೂ ಓದಿ: ಮೋಕ್ಷಿತಾ ಮತ್ತು ತ್ರಿವಿಕ್ರಮ್ ನಡುವೆ ಬಿಗ್ ವಾರ್!
ಬೆಂಗಳೂರಿಗರ ಸರಾಸರಿ ಮಾಸಿಕ ಆದಾಯ 29,500 ರು.ನಷ್ಟಿದೆ. ಇದು ದೇಶದಲ್ಲೇ ಅತಿ ಹೆಚ್ಚು. ಎರಡನೇ ಸ್ಥಾನದಲ್ಲಿರುವ ಚೆನ್ನೈ ಉದ್ಯೋಗಿಗಳ ಸರಾಸರಿ ಮಾಸಿಕ ವೇತನ 24500 ರು.ನಷ್ಟಿದೆ. ವಾರ್ಷಿಕ ವೇತನ ಏರಿಕೆ ಶೇ.7.5ರಷ್ಟಿದೆ. ಮೂರನೇ ಸ್ಥಾನದಲ್ಲಿರುವ ದೆಹಲಿ ಉದ್ಯೋಗಿಗಳ ಮಾಸಿಕ ವೇತನ 27800 ರು.ನಷ್ಟಿದೆ. ಅಲ್ಲಿ ವೇತನ ಏರಿಕೆ ಪ್ರಮಾಣ ಶೇ.7.3ರಷ್ಟಿದೆ ಎಂದು ವರದಿ ಹೇಳಿದೆ.