ಪತ್ನಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಲಾರಿ ಮಾಲೀಕನಾಗಿ ಕೆಲಸ ಮಾಡಿಕೊಂಡಿದ್ದ ಸೋಮಶೇಖರ್ (45) ಆತ್ಮಹತ್ಯೆಗೆ ಶರಣಾಗಿದ್ದಾರೆ.
ಪತಿ ಸೋಮಶೇಖರ್ ಸಾವಿಗೆ ಅವರ ಪತ್ನಿ ಪವಿತ್ರಾಳ ಅನೈತಿಕ ಸಂಬಂಧವೇ ಕಾರಣ ಎಂದು ಸೋಮಶೇಖರ್ ಭಾವ ನಾಗರಾಜ್ ಎಂಬುವವರು ಆರೋಪಿಸಿದ್ದಾರೆ. ಮಾಜಿ ಉಪ ಕುಲಪತಿ ಮೈಲಾರಪ್ಪ, ಪವಿತ್ರಾ ಜೊತೆಗೆ ಕಳೆದ ಹಲವು ದಿನಗಳಿಂದ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ. ಈ ವಿಚಾರ ಸೋಮಶೇಖರ್ ಗೆ ತಿಳಿದಿತ್ತು. ಆಗಾಗೆ ಕಲಹಗಳೂ ಕೂಡ ನಡೆದಿದ್ದು, ಇದನ್ನ ತನ್ನ ಬಳಿ ಹೇಳಿಕೊಂಡಿದ್ದ ಪೋಲೀಸರಿಗೆ ದೂರು ನೀಡಿದರೂ ತೆಗೆದುಕೊಂಡಿರಲಿಲ್ಲ ಎಂದು ಆರೋಪಿಸಿದ್ಧಾರೆ. ಬೆಂಗಳೂರಿನ ಮಹಾಲಕ್ಷ್ಮಿ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.