ಪೀಣ್ಯ ಫ್ಲೈ ಓವರ್ ಮೇಲೆ ಶೀಘ್ರವೇ ಬಾರೀ ವಾಹನ ಸಂಚಾರಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ವಾರದ 6 ದಿನ ಎಲ್ಲಾ ಬಗೆಯ ವಾಹನಗಳ ಸಂಚಾರಕ್ಕೆ ತಜ್ಞರ ಸಮಿತಿಯಿಂದ ಶಿಫಾರಸ್ಸು ಮಾಡಲಾಗಿದೆ. ಪೀಣ್ಯ ಫ್ಲೈ ಓವರ್ 2021 ರಲ್ಲಿ ದೋಷ ಕಂಡು ಬಂದಿತ್ತು. ಇದರಿಂದಾಗಿ ಎರಡೂವರೆ ವರ್ಷದಿಂದ ಹೆವಿ ವಾಹನಗಳ ಸಂಚಾರಕ್ಕೆ ಅಡೆ ತರಲಾಗಿತ್ತು. 5 ಕಿ.ಮೀ ಉದ್ದದ್ದ 120 ಪಿಲ್ಲರ್ ಒಳಗೊಂಡ ಸೇತುವೆ ಇದಾಗಿದ್ದು, ಫೈ ಓವರ್ನ 8ನೇ ಮೈಲಿ ಜಂಕ್ಷನ್ ಸಮೀಪ 102 & 103 ನೇ ಪಿಲ್ಲರ್ ನಡುವೆ 3 ಕೇಬಲ್ ಬಾಗಿದ ಪರಿಣಾಮ ಮೇಲಸೇತುವೆ ಮೇಲೆ ಎಲ್ಲ ವಾಹನಗಳ ಸಂಚಾರವನ್ನು NHAI ನಿಷೇಧಿಸಿತ್ತು.
ಇದಾದ ಬಳಿಕ ಎರಡು ಪಿಲ್ಲರ್ ಗಳ ನಡುವೆ 240 ಹೊಸ ಕೇಬಲ್ ಅಳವಡಿಕೆ ಮಾಡಲಾಗಿತ್ತು. 2ನೇ ಹಂತದಲ್ಲೂ ಎರಡು ಪಿಲ್ಲರಗಳ ನಡುವೆ ತಲಾ 10 ರಂತೆ 1200 ಪಿಲ್ಲರ್ ಅಳವಡಿಕೆ ಮಾಡಲಾಗಿದೆ ಈಗಾಗ್ಲೇ ಇದಕ್ಕೆ ಚಾಲನೆ ಸಿಕ್ಕಿದೆ. ಸದ್ಯ 300 ಕೇಬಲ್ ಅಳವಡಿಕೆ ಮಾಡಲಾಗಿದೆ. ಉಳಿದ ಕೇಬಲ್ ಅಳಕವಡಿಕೆ ಮಾಡಿ ಸಿಮೆಂಟ್ ಪ್ಯಾಚ್ ಗೆ ಕಾಲಾವಕಾಶ ಬೇಕಾಗಿದ್ದು, ಆದ್ದರಿಂದ ವಾರದ 6 ದಿನ ಎಲ್ಲಾ ಬಗೆಯ ವಾಹನಗಳಿಗೆ ಅವಕಾಶ ನೀಡಲಾಗುವುದು.
ಒಂದು ದಿನ ಸಂಪೂರ್ಣ ಸೇತುವೆ ಬಂದ್ ಮಾಡುವಂತೆ ತಜ್ಞರ ಸಮಿತಿ ಶಿಫಾರಸ್ಸು ಮಾಡಿದೆ. ತಜ್ಞರ ಅಭಿಪ್ರಾಯವನ್ನು ಸಂಚಾರ ಪೊಲೀಸರಿಗೆ ರವಾನಿಸಿರೋ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ. ಅದರಂತೆ ಸಂಚಾರ ಪೊಲೀಸರು ವಾರದಲ್ಲಿ 6 ದಿವಸ ಎಲ್ಲ ವಾಹನಗಳ ಸಂಚಾರಕ್ಕೆ ಶೀಘ್ರದಲ್ಲೇ ಅನುಮತಿ ನೀಡುವ ಸಾಧ್ಯತೆ ಇದೆ. ಇನ್ನುಳಿದ 900 ಕೇಬಲ್ ಬದಲಾವಣೆಗೆ ಇನ್ನೂ ಒಂದು ವರ್ಷ ಕಾಲಾವಕಾಶ ಬೇಕಾಗಬಹುದು. ಅಲ್ಲಿಯವರೆಗೂ ಇದೇ ಪರಿಸ್ಥಿತಿ ಮುಂದುವರೆಯಲಿದೆ