- ಮಹಿಳಾ ಪ್ರೊಫೇಸರ್ ಎಂದು ಹೇಳಿಕೊಂಡು 7 ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ
- ವಾಯ್ಸ್ ಬದಲಾಯಿಸುವ ಆ್ಯಪ್ ಮೂಲಕ ಹುಡುಗಿಯರನ್ನ ಕರೆಸಿಕೊಳ್ಳುತ್ತಿದ್ದ
- ಆರೋಪಿ ವಿರುದ್ಧ ಪೋಕ್ಸೊ ಕಾಯ್ದೆಯಡಿ ಕೇಸ್ ದಾಖಲು
ಭೋಪಾಲ್ : ವಾಯ್ಸ್ ಬದಲಾಯಿಸುವ ಆ್ಯಪ್ ಮೂಲಕ ಮಹಿಳಾ ಪ್ರೊಫೇಸರ್ ಎಂದು ಹೇಳಿಕೊಂಡು 7 ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರವೆಸಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಬ್ರಿಜೇಶ್ ಪ್ರಜಾಪತಿ ಅತ್ಯಾಚಾರಗೈದ ವ್ಯಕ್ತಿ. ವಿದ್ಯಾರ್ಥಿ ವೇತನ ಕೊಡಿಸುತ್ತೇನೆಂದು ಶಿಕ್ಷಕಿಯಂತೆ ಫೋನ್ ಕರೆ ಮಾಡಿ ಕರೆಸಿಕೊಂಡು ಅತ್ಯಾಚಾರಗೈದಿದ್ದಾನೆ. ಇದುವರೆಗೂ 4 ವಿದ್ಯಾರ್ಥಿನಿಯರು ದೂರು ನೀಡಿದ್ದಾರೆ. ಈಗಾಗಲೇ ಆರೋಪಿಯು ಇತರ ಮೂವರು ಹುಡುಗಿಯರ ಮೇಲೆ ಅತ್ಯಾಚಾರವೆಸಗಿದ್ದಾಗಿ ತಪ್ಪೋಪ್ಪಿಕೊಂಡಿದ್ದಾನೆ. ಆರೋಪಿ ವಿರುದ್ಧ ಈಗಾಗಲೇ ಪೋಕ್ಸೊ ಕಾಯ್ದೆಯಡಿ ಕೇಸ್ ದಾಖಲಾಗಿದ್ದು, ಪೊಲೀಸರು ಕಸ್ಟಡಿಗೆ ಕರೆ ತಂದಿದ್ದಾರೆ.
ವಾಯ್ಸ್ ಬದಲಾಯಿಸುವ ಆ್ಯಪ್ ಮೂಲಕ ಅರ್ಚನಾ ಎಂದು ಹೇಳಿಕೊಂಡು ಈ ರೀತಿಯಾದ ಕೃತ್ಯ ಎಸಗಿದ್ದಾನೆ. ಎಸ್ಸಿಎಸ್ಟಿ ಸ್ಟೂಡೆಂಟ್ ವೇತನಕ್ಕೆ ಅರ್ಹರಾಗಿರುವ ವಿದ್ಯಾರ್ಥಿನಿಯರನ್ನೇ ಇತ ಟಾರ್ಗೆಟ್ ಮಾಡಿಕೊಂಡಿದ್ದನು. ಶಿಕ್ಷಣ ವೇತನ ಸಮಸ್ಯೆ ಬಗೆಹರಿಸುವ ನೆಪ ಮಾಡಿಕೊಂಡು ವಿದ್ಯಾರ್ಥಿನಿಯರನ್ನು ಕರೆಸಿಕೊಳ್ಳುತ್ತಿದ್ದನು. ನಂತರದಲ್ಲಿ ಅವರ ಕೈಯಲ್ಲಿರುವ ಮೊಬೈಲ್ ಕಸಿದುಕೊಂಡು ಯಾರಿಗೂ ತಿಳಿಯದಂತೆ ರೇಪ್ ಮಾಡುತ್ತಿದ್ದನು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈಗಾಗಲೇ ಪೊಲೀಸರು ಆರೋಪಿ ಕಡೆಯಿಂದ 16 ಮೊಬೈಲ್ಗಳನ್ನು ಕಸಿದುಕೊಂಡಿದ್ದಾರೆ. ಹುಡುಗಿಯರು ಇತನ ವಿರುದ್ಧ ದೂರು ನೀಡಲು ಭಯಪಡುತ್ತಿದ್ದರು. ನಿರುದ್ಯೋಗಿ ಆದ ಈತ ಪ್ರಸ್ತುತ ವರ್ಷದಿಂದ ಈ ತರಹದ ದಂಧೆ ಶುರುಮಾಡಿಕೊಂಡಿದ್ದನು.