- ಈಶ್ವರ ಖಂಡ್ರೆ ಪುತ್ರ ಸಾಗರ್ ಖಂಡ್ರೆ ಮುಸ್ಲಿಂ ಮತಗಳಿಂದಲೇ ಗೆದ್ದಿದ್ದು
- ಮುಸ್ಲಿಂರ ಕೆಲಸವನ್ನ ಸಚಿವ ಈಶ್ವರ ಖಂಡ್ರೆ ತಲೆಬಾಗಿ ಮಾಡಬೇಕಾಗುತ್ತದೆ
- ಸಚಿವ ಜಮೀರ್ ಅಹ್ಮದ್ ಈ ಹೇಳಿಕೆ ಭಾರೀ ಚರ್ಚೆಗೆ ಗುರಿಯಾಗಿದೆ
ಈಶ್ವರ ಖಂಡ್ರೆ ಮಗ ಮುಸ್ಲಿಂ ಮತಗಳಿಂದ ಗೆದಿದ್ದು, ಹೀಗಾಗಿ ನಮ್ಮ (ಮುಸ್ಲಿಮರ) ಕೆಲಸ ಅವರು ಮಾಡಿ ಕೊಡಲೇಬೇಕು. ಹಮಾರ್ ಕಾಮ್ ಓ ಝಕ್ ಮಾರ್ಕೆ ಕರ್ನಾ..! ಎಂದು ಹೇಳಿದ್ದಾರೆ. ಎಂದು ಸಚಿವ ಜಮೀರ್ ಅಹ್ಮದ್ ಅವರು ಕಾರ್ಯಕ್ರಮವೊಂದರಲ್ಲಿ ನೀಡಿರುವ ಹೇಳಿಕೆ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಸಾಮಾನ್ಯವಾಗಿ ಸಚಿವ ಜಮೀರ್ ಅಹ್ಮದ್ ನೀಡುವ ಹೇಳಿಕೆಗಳು ಬಿಜೆಪಿಯಲ್ಲಿ ಚರ್ಚೆಗೆ ಗುರಿಯಾಗುತ್ತದೆ.
ಅಂದಹಾಗೆ ಬೀದರ್ನಲ್ಲಿ ನಡೆದ ವಕ್ಫ್ ಅದಾಲತ್ನಲ್ಲಿ ಸಚಿವ ಜಮೀರ್ ಅಹ್ಮದ್ ನೀಡಿರುವ ಹೇಳಿಕೆ ವಿವಾದಕ್ಕೆ ಗುರಿಯಾಗಿದ್ದು, ಈಶ್ವರ ಖಂಡ್ರೆ ಮಗ ಮುಸ್ಲಿಂ ಮತಗಳಿಂದ ಗೆದಿದ್ದು, ಹೀಗಾಗಿ ನಮ್ಮ (ಮುಸ್ಲಿಮರ) ಕೆಲಸ ಅವರು ಮಾಡಿ ಕೊಡಲೇಬೇಕು. ಹಮಾರ್ ಕಾಮ್ ಓ ಝಕ್ ಮಾರ್ಕೆ ಕರ್ನಾ..! ಎಂದು ಹೇಳಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಈಶ್ವರ ಖಂಡ್ರೆ ಪುತ್ರ ಸಾಗರ್ ಖಂಡ್ರೆ ಮುಸ್ಲಿಂ ಮತಗಳಿಂದಲೇ ಗೆದ್ದಿದ್ದು, ಸಿರ್ಪ್ ಔರ್ ಸಿರ್ಪ್ ಮುಸ್ಲಿಂ ಓಟ್ಸೆ ಸಾಗರ್ ಖಂಡ್ರೆ ಜೀತೆ ಸೋ ಹೈ. (ಕೇವಲ ಅಂದರೆ ಕೇವಲ ಮುಸ್ಲಿಂಮರ ಮತದಿಂದ ಸಾಗರ್ ಖಂಡ್ರೆ ಗೆದ್ದಿದ್ದಾನೆ. ಹಮಾರಾ ಕಾಮ್ ಝಕ್ ಮಾರ್ಕೆ ಕರ್ನಾ ಪಡ್ತಾ ಹೈ. ನಮ್ಮ ಕೆಲಸವನ್ನು ತಲೆ ಬಗ್ಗಿಸಿಕೊಂಡು ಅವನು ಮಾಡಬೇಕು ಎಂದು ಜಮೀರ್ ಹೇಳಿಕೆ ನೀಡಿದ್ದಾರೆ.