ಬಿಗ್ಬಾಸ್ ಮನೆಗೆ ಬರುವ ಪ್ರತಿಯೊಬ್ಬ ಸ್ಪರ್ಧಿಗೂ ಈ ಆಸೆ ಇದೇ ಆಗಿರುತ್ತೆ. ಒಂದಲ್ಲಾ ಒಂದು ಬಾರಿ ಬಿಗ್ಬಾಸ್ ಮನೆಯಿಂದ ಆಚೆ ಹೋಗುವ ಮುನ್ನ ಈ ಪಟ್ಟವನ್ನು ಸ್ವೀಕರಿಸಬೇಕು. ಅಲ್ಲದೇ ಈ ಅಧಿಕಾರ ಸಿಕ್ಕ ಮೇಲೆ ನಮ್ಮ ನಾಯಕತ್ವ ಹೇಗೆ ಇರುತ್ತೆ ಅಂತ ಎಲ್ಲರಿಗೂ ತಿಳಿಯಬೇಕು ಅಂತ. ಆದ್ರೆ ಈ ಚಾನ್ಸ್ ಎಲ್ಲ ಸ್ಪರ್ಧಿಗಳಿಗೆ ದಕ್ಕುವುದಿಲ್ಲ. ಅದು ಕ್ಯಾಪ್ಟನ್ಸಿ ಪಟ್ಟ. , ಈ ಬಾರಿಯ ಬಿಗ್ಬಾಸ್ ಸೀಸನ್ 11ರಲ್ಲಿ ಸ್ಪರ್ಧಿಗಳು ಕ್ಯಾಪ್ಟನ್ಸಿ ಪಟ್ಟ ಗಿಟ್ಟಿಸಿಕೊಳ್ಳೋದಕ್ಕಾಗಿ ತುಂಬಾನೇ ಕಷ್ಟ ಪಡುತ್ತಿದ್ದಾರೆ. ಕಾಲ ಕಾಲಕ್ಕೆ ಬಿಗ್ಬಾಸ್ ಕೊಟ್ಟ ಟಾಸ್ಕ್ ಆಡುತ್ತಿರೋ ಸ್ಪರ್ಧಿಗಳು ಒಂದಲ್ಲಾ ಒಂದು ಕಡೆ ಎಡವುತ್ತಿದ್ದಾರೆ. ಆದರೆ ಅಚ್ಚರಿ ಎಂದರೆ ಬಿಗ್ಬಾಸ್ ಮನೆಯಲ್ಲಿ ಎರಡು ಬಾರಿ ಭವ್ಯಾ ಗೌಡ ಹಾಗೂ ತ್ರಿವಿಕ್ರಮ್ ಕ್ಯಾಪ್ಟನ್ ಪಟ್ಟವನ್ನು ಸ್ವೀಕರಿಸಿದ್ದಾರೆ.
ಆದರೆ ಐಶ್ವರ್ಯಾ ಈ ಹಿಂದೆ ಜೋಡಿ ಕ್ಯಾಪ್ಟನ್ ಆಗಿದ್ದರು. ಈ ಬಾರಿ ಸಿಂಗಲ್ ಕ್ಯಾಪ್ಟನ್ ಆಗಬೇಕು ಅಂತ ಆಸೆ ಇಟ್ಟುಕೊಂಡಿದ್ದರು. ಆದರೆ ಕೊನೆಯ ಕ್ಷಣದಲ್ಲಿ 13ನೇ ವಾರಕ್ಕೆ ಬಿಗ್ಬಾಸ್ ಮನೆಯ ಕ್ಯಾಪ್ಟನ್ ಆಗಿ ಭವ್ಯಾ ಗೌಡ ಆಯ್ಕೆಯಾದರು. ನಿನ್ನೆಯ ಸಂಚಿಕೆಯಲ್ಲಿ ಐಶ್ವರ್ಯಾ ಸಿಂಧೋಗಿ, ಈ ಸಲ ನಾನು ಕ್ಯಾಪ್ಟನ್ ಆಗಲೇಬೇಕು. ಇಲ್ಲವಾದರೇ ಬಿಗ್ಬಾಸ್ನಿಂದ ಎಲಿಮಿನೇಟ್ ಆಗಿಬಿಡ್ತೀನಿ ಅಂತ ಹೇಳಿಕೊಂಡಿದ್ದಾರೆ. ಅವರ ಮಾತನ್ನು ಕೇಳಿಸಿಕೊಂಡಿದ್ದ ವೀಕ್ಷಕರು ಐಶ್ವರ್ಯಾಗೆ ಅವರ ಮೇಲೆ ನಂಬಿಕೆ ಇಲ್ವಾ ಅಂತ ಅಂದುಕೊಳ್ಳುತ್ತಿದ್ದಾರೆ. ಇನ್ಮುಂದೆ ಐಶ್ವರ್ಯಾ ಬಿಗ್ಬಾಸ್ ಮನೆಯ ಕ್ಯಾಪ್ಟನ್ ಆಗೋದೇ ಇಲ್ವಾ ಅಂತ ಅನುಮಾನ ಶುರುವಾಗಿದೆ.