ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11, 90ನೇ ದಿನಕ್ಕೆ ಕಾಲಿಟ್ಟಿದೆ. ಈ ಹೊತ್ತಲ್ಲಿ ವಾರ ಕತೆ ನಡೆಸಿಕೊಡಲು ವೇದಿಕೆಗೆ ಕಿಚ್ಚ ಸುದೀಪನ ಆಗಮನವಾಗಿದೆ. ವೇದಿಕೆಗೆ ಬಂದ ಕಿಚ್ಚ ಸುದೀಪ್ ಕರ್ಮದ ಬಗ್ಗೆ ಮಾತಾಡಿದ್ದಾರೆ. ನೀತಿ ನಿಜಾಯ್ತಿ ಯಾರಿಗೆ ಬೇಕು ಗೆದ್ದರೆ ಸಾಕು ಅಂತ ಆಡೋರು ಕೆವರು ಆದ್ರೆ, ಗೆದ್ದಾಗ ಖುಷಿ ಸಿಗುತ್ತೆ, ಆದರೆ ಕೊನೆಗೆ ಮಾಡಿದ ಕೆಲಸಕ್ಕೆ ಕರ್ಮ ಬಂದು ಹಿಡಿದುಕೊಳ್ಳುತ್ತೆ ವೇದಿಕೆ ಮೇಲೆ ಖಡಕ್ ಎಚ್ಚರಿಕೆ ಸಂದೇಶ ಕೊಟ್ಟಿದ್ದಾರೆ.
ಕಿಚ್ಚ ಸುದೀಪ್ ಹೇಳೊದಕ್ಕೂ ಒಂದು ಕಾರಣ ಇದೆ. ನಿನ್ನೆ ಬಿಗ್ಬಾಸ್ ಭವ್ಯಾ ಗೌಡ ತಂಡಕ್ಕೆ ಒಂದು ಟಾಸ್ಕ್ ಕೊಟ್ಟಿದ್ದರು. ಇದೇ ಟಾಸ್ಕ್ನಲ್ಲಿ ಭವ್ಯಾ ಗೌಡ ಅವರೇ ಮೋಸ ಮಾಡಿದ್ದಾರೆ. 5 ಸ್ಪರ್ಧಿಗಳಿಗೆ ಕ್ಯಾಪ್ಟನ್ಸಿ ಟಾಸ್ಕ್ ಅನ್ನು ಕೊಟ್ಟಿದ್ದರು ಬಿಗ್ಬಾಸ್. ಐದು ಸ್ಪರ್ಧಿಗಳು ಸಾಲಾಗಿ ನಿಂತುಕೊಂಡಿರಬೇಕು. ಆಗ ಬಿಗ್ಬಾಸ್ ಹೇಳುವ ನಂಬರ್ನಲ್ಲಿರೋ ಚೆಂಡುಗಳನ್ನು ಓಡಿಹೋಗಿ ಹಿಡಿದು ಬಾಸ್ಕೆಟ್ನಲ್ಲಿ ಹಾಕಬೇಕು. ಇದೇ ಟಾಸ್ಕ್ನಲ್ಲಿ ಬಿಗ್ಬಾಸ್ ಮೊದಲು 9 ನಂಬರಿನ ಗೊಂಚಲಿನಿಂದ ಚಂಡುಗಳನ್ನು ತೆಗೆದುಕೊಂಡು ಹೋಗಲು ಹೇಳುತ್ತಾರೆ. ಆಗ ಎಲ್ಲರೂ ಓಡಿ ಹೋಗಿ ಆ ಚೆಂಡನ್ನು ಹಿಡಿಯುತ್ತಾರೆ. ಆಗ ಇದೇ ವೇಲೆ 3ನೇ ಗೊಂಚಲಿನಿಂದ ಚಂಡೊಂದು ಬಿಳುತ್ತದೆ. ಆದರೆ ಇದನ್ನೂ ಯಾರೂ ಉಸ್ತುವಾರಿಗಳು ಗಮನಕ್ಕೆ ಬರೋದಿಲ್ಲ. ಆ ಕೂಡಲೇ ಭವ್ಯಾ ಆ ಚೆಂಡನ್ನು ಎತ್ತಿಕೊಂಡು ಬುಟ್ಟಿಗೆ ಹಾಕುತ್ತಾರೆ. ಆಗ ಆ ಅದೇ ಬಾಲ್ ಬುಟ್ಟಿಗೆ ಬಿಳುತ್ತದೆ. ಇದರಿಂದ ಮೊದಲ ಹಂತದಲ್ಲಿ ಭವ್ಯಾ ಗೌಡ ಸೇಪ್ ಆಗುತ್ತಾರೆ. ಇದಾದ ಬಳಿಕ ಮತ್ತೆ ಇದೇ ಪ್ರಕ್ರಿಯೆಯಲ್ಲಿ ಚೆಂಡನ್ನು ಹಾಕಿ ಭವ್ಯಾ ಗೌಡ ಈ ವಾರದ ಕ್ಯಾಪ್ಟನ್ ಆಗುತ್ತಾರೆ. ಆ ಬಾಲ್ ಬೇರೆ ಗೊಂಚಲಿನಿಂದ ಬಿದ್ದಿದೆ ಅಂತ ಗೊತ್ತಿದ್ದರು ಭವ್ಯಾ ಗೌಡ ಸತ್ಯ ಹೇಳದೇ ಸುಳ್ಳಿನಿಂದ ಕ್ಯಾಪ್ಟನ್ಸಿ ಪಟ್ಟ ತಮ್ಮದಾಗಿಸಿಕೊಂಡಿದ್ದಾರೆ. ಇದೇ ವಿಚಾರವಾಗಿ ಇಂದಿನ ಕಿಚ್ಚನ ಪಂಜಾಯ್ತಿಯಲ್ಲಿ ಚರ್ಚೆ ನಡೆಯಲಿದೆ.