ʼ ಬಿಗ್ಬಾಸ್ ಸೀಸನ್ 11ʻ 70 ನೇ ದಿನಕ್ಕೆ ಕಾಲಿಟ್ಟಿದೆ. ಸ್ಪರ್ಧಿಗಳ ಮಧ್ಯೆ ಕೆಲವು ಟಾಸ್ಕ್ಗಳ ಸಲುವಾಗಿ ಎಲ್ಲರಲ್ಲೂ ದಿಕ್ಕಾಪಾಲಾಗಿದ್ದಾರೆ. ಈ ಸಮಯದಲ್ಲಿ ಮನೆಯ ಎಲ್ಲರ ಮೊಗದಲ್ಲಿ ಸಂತಸದ ಮೂಡಿದೆ . ಕಳೆದ ಎರಡ್ಮೂರು ವಾರಗಳಿಂದ ಬೇಸರದಲ್ಲಿದ್ದ ಸ್ಪರ್ಧಿಗಳು ಇಂದು ಸಂತೋಷದಿಂದ ಇದ್ದಾರೆ. ಮನೆಯಿಂದ ಯಾರದರೂ ಹೊರ ಹೋಗುತ್ತಾರೆ ಎಂಬ ಟೆನ್ಷನ್ ಇತ್ತು. ಆದ್ರೆ ಯಾರೂ ಎಲಿಮಿನೇಷನ್ ಆಗಿಲ್ಲ. ಇದರ ಜೊತೆಗೆ ಹಳೆಯ ಬಿಗ್ ಬಾಸ್ ಸ್ಪರ್ಧಿಗಳು ಮನೆಗೆ ಆಗಮಿಸಿ ಬಿಗ್ ಸರ್ಪ್ರೈಸ್ ಕೊಟ್ಟಿದ್ದು ಸ್ಪರ್ಧಿಗಳೆಲ್ಲಾ ಖುಷಿಯಿದ ಕುಣಿದು ಕುಪ್ಪಳಿಸಿದ್ದಾರೆ.
ಈ ಬಾರಿಯ ಬಿಗ್ ಬಾಸ್ ಸೀಸನ್ಗೆ 11 ಕ್ಕೆ ಬಿಗ್ಬಾಸ್ ಸೀಸನ್- 10 ರ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಇದರಿಂದ ಎಲ್ಲ ಹಾಲಿ ಸ್ಪರ್ಧಿಗಳು ಭಾರೀ ಖುಷಿಯಾಗಿದ್ದಾರೆ. ಅವರ ಜೊತೆ ಬೆರೆತು ಸಖತ್ ಸ್ಟೆಪ್ಸ್ ಕೂಡ ಹಾಕ್ತಿದ್ದಾರೆ. ಮನೆಯಲ್ಲಿ ಸರ್ಪ್ರೈಸ್ ಜೊತೆಗೆ ಮಜಾ ಕೂಡ ತುಂಬಿ ತುಳುಕುತ್ತಿದೆ. ಹನುಮಂತು ಅಂತು ತನಿಷಾ ಕುಪ್ಪಂಡಾ ಜೊತೆ ಚುಟು ಚುಟು ಅಂತೈತೆ ಎನ್ನುವ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ವೇಳೆ ತನಿಷಾ ಕುಪ್ಪಂಡಾ ಗುರಾಯಿಸಿಕೊಂಡು ಹನುಮಂತು ಅವರನ್ನು ನೋಡಿದ್ದು ನಾಚಿ ನೀರಾಗಿ ಹೋಗಿದ್ದಾನೆ. ಇನ್ನು ಮಾವ ಎಂದು ತುಕಾಲಿ ಸಂತು ಹೆಗಲ ಮೇಲೆ ಹನುಮಂತು ಹಾರಿದ್ದಾನೆ. ಮಾವ ಮಾವ ಅಂದು ಬಿಟ್ಟು ಮಾನಸನೇ ಕಳಿಸಿ ಬಿಟ್ಟಿಯಲ್ಲಾ ಮಾವ ಎಂದು ತುಕಾಲಿ ಸಂತು ಕಾಮಿಡಿ ಮಾಡಿದ್ದಾರೆ. ಸಂತು ಜೊತೆ ಪಂತು ಅಂದರೆ ವರ್ತೂರು ಸಂತೋಷ ಕೂಡ ಬಿಗ್ ಮನೆಗೆ ಬಂದಿದ್ದು ಇಬ್ಬರು ತಬ್ಬಿಕೊಂಡು ಖುಷಿಯಿಂದ ಕಾಲ ಕಳೆಯುತ್ತಿದ್ದಾರೆ.