ಕನ್ನಡದ ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿಗಳ ಆಟ ದಿನಗಳು ಕಳೆದಂತೆ ರೋಚಕ ಹಂತವನ್ನ ತಲುಪುತ್ತಿದೆ. ಮನೆಯಲ್ಲೇ ಉಳಿಯೋ ಹೋರಾಟದಲ್ಲಿರುವ 10 ಸದಸ್ಯರು ಆಡುವ ಭರದಲ್ಲಿ ಯಡವಟ್ಟು ಮಾಡಿಕೊಳ್ಳುತ್ತಿದ್ದಾರೆ. ಕಳೆದ ವಾರದ ಟಾಸ್ಕ್ಗಳಲ್ಲಿ ಸಾಕಷ್ಟು ಗೊಂದಲ, ಗಲಾಟೆ ನಡೆದಿದ್ದು ಕಿಚ್ಚ ಸುದೀಪ್ ಅವರ ಕೆಂಗಣ್ಣಿಗೆ ಗುರಿಯಾಗಿದೆ. ಈ ವಾರದ ಪಂಚಾಯ್ತಿಯಲ್ಲಿ ಟಾಸ್ಕ್ಗಳ ಗಲಾಟೆಯನ್ನೇ ಚರ್ಚಿಸಿದ ಕಿಚ್ಚ ಸುದೀಪ್ ಅವರು ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಎಲ್ಲರಿಗೂ ಎಚ್ಚರಿಕೆ ಕೊಟ್ಟ ಕಿಚ್ಚ ಸುದೀಪ್, ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ಗಳನ್ನ ಕರೆಕ್ಟ್ ಆಗಿ ಆಡೋಕೆ ಆದ್ರೆ ಆಡಿ. ಇಲ್ಲದಿದ್ದರೆ ಈ ವೇದಿಕೆ ಮೂಲಕ ನಾನೇ ಮಾತು ಕೊಡುತ್ತಿದ್ದೇನೆ. ಟಾಸ್ಕ್ ನಡೆಸೋದಕ್ಕೆ ನಾನೇ ಬಿಡಲ್ಲ. ಹಾಗೇ ಇರೋಣ ಎಂದಿದ್ದಾರೆ. ಟಾಸ್ಕ್ ಅಂತ ಬಂದಾಗ ಬರೀ ಟಾಸ್ಕ್ ಆಡಿದ್ರೆ ಓಕೆ. ಈ ವಾರ ನಡೆದಿರೋ ಉಸ್ತುವಾರಿ, ನಡೆಸಿರೋ ರೀತಿ ನನಗೆ ಹೇಸಿಗೆ ಆಯ್ತು. ಒಳ್ಳೆಯದನ್ನ ನೋಡೋಕೆ ನೀವು ಯಾರು ರೆಡಿನೇ ಇಲ್ಲ. ಫೌಲ್, ಫೌಲ್, ಫೌಲ್ 20 ಸೆಕೆಂಡ್ ಅಂತೀರಾ. ಈ ಫೌಲ್ ಅನ್ನೋದೇ ಬಿಗ್ ಬಾಸ್ನ ಯಾವುದೇ ಸೀಸನ್ನಲ್ಲೂ ಇರಲಿಲ್ಲ.
ಭವ್ಯ ಹಾಗೂ ಚೈತ್ರಾ ಅವರು ಫೌಲ್ ಆದಾಗ 20 ಸೆಕೆಂಡ್ ಅನ್ನು ಎಣಿಸೋ ರೀತಿಯೇ ಬೇರೆ. ಇಬ್ಬರಿದ್ದು ಒಂದೊಂದು ಸ್ಪೀಡ್. ಆಟ ಆಡದೇ ಇರೋರು ಮಾತನಾಡಬಾರದು ಅಂದ್ರೆ ಹೇಗೆ ಅವರು ಆಡುವವರಿಗೆ ಪ್ರೋತ್ಸಾಹ ನೀಡಬೇಕು. ಎಲ್ಲಿ ಏನು ಮಾಡಬೇಕೋ, ಎಲ್ಲಿ ಮಾತಾಡಬೇಕು ಅಲ್ಲಿ ಮಾತಾಡಬೇಕು. ಪ್ಲೇಯರ್ಸ್ ಮಾತ್ರ ಪ್ಲೇಯರ್ಸ್ ಆಗಿ. ಉಸ್ತುವಾರಿಗಳು ಪ್ಲೇಯರ್ಸ್ ಆಗಬೇಡಿ. ಉಸ್ತುವಾರಿಗಳು ಪ್ಲೇಯರ್ಸ್ ಆಗುತ್ತಾ ಇದ್ದೀರಾ ಇಲ್ಲಿ. ಈ ವಾರ ನಡೆದ ಉಸ್ತುವಾರಿ, ನಡೆಸಿರೋ ರೀತಿ ಕೆಟ್ಟದಾಗಿತ್ತು ಎಂದು ಸುದೀಪ್ ಹೇಳಿದರು.
ಇದೇ ವೇಳೆ ಹನುಮಂತು ಅವರ ಹೆಸರನ್ನು ಪ್ರಸ್ತಾಪಿಸಿದ ಕಿಚ್ಚ ಸುದೀಪ್, ನಿಮ್ಮ ಬಾಯಿಂದ ಇನ್ನೊಂದು ಸಾರಿ ಟಾಸ್ಕ್ ರದ್ದಾದ್ರು ಪರವಾಗಿಲ್ಲ ಅಂತ ಬಂದ್ರೆ ಸರಿ ಇರಲ್ಲ. ನಿಮಗೆ ಎಷ್ಟೇ ವೋಟ್ ಬೀಳುತ್ತಾ ಇರಲಿ. ಹೊರಗಡೆ ಕಳಿಸೋ ಜವಾಬ್ದಾರಿ ನನ್ನದು ಎಂದು ಸುದೀಪ್ ನೇರವಾಗಿ ಎಚ್ಚರಿಸಿದರು. ರದ್ದಾದ್ರೂ ಪರ್ವಾಗಿಲ್ಲ ಅನ್ನೋ ಗಾಂಚಲಿ ಮಾತುಗಳು ಯಾರ ಬಾಯಲ್ಲೂ ಬೇಡ ಮಾ.. ಇದು ಯಾರ ಅಪ್ಪನ ಮನೆಯೂ ಅಲ್ಲ. ಟಾಸ್ಕ್ ರದ್ದಾಗಬೇಕಾ ಬೇಡ್ವ ಅಂತ ಬಿಗ್ ಬಾಸ್ ಡಿಸೈಡ್ ಮಾಡುತ್ತಾರೆ ಎಂದು ಮನೆಯ ಎಲ್ಲಾ ಸದಸ್ಯರಿಗೂ ಕಿಚ್ಚ ಸುದೀಪ್ ಖಡಕ್ ಕಿವಿಮಾತು ಹೇಳಿದ್ದಾರೆ.