ಕನ್ನಡದ ಬಿಗ್ ರಿಯಾಲಿಡಿ ಶೋ ಬಿಗ್ಬಾಸ್ ಸೀಸನ್ 11 ದಿನದಿಂದ ದಿನಕ್ಕೆ ಹೊಸ ಹೊಸ ಟ್ವಿಸ್ಟ್ಗಳನ್ನು ಪಡೆದುಕೊಂಡು ಮುಂದೆ ಸಾಗುತ್ತಿದೆ . 84 ದಿನಕ್ಕೆ ಕಾಲಿಡುತ್ತಿರೋ ಹೊತ್ತಲ್ಲಿ ಬಿಗ್ಬಾಸ್ ಮನೆಯಲ್ಲಿ ಅಚ್ಚರಿಯ ಘಟನೆಗಳು ನಡೆಯುತ್ತಿದೆ. ಇಷ್ಟು ದಿನ ಸೈಲೆಂಟ್ ಆಗಿದ್ದ ಮನೆ ಮಂದಿ ನಿನ್ನೆಯ ಕಿಚ್ಚ ಪಂಜಾಯ್ತಿಯಲ್ಲಿ ಚೈತ್ರಾ ಕುಂದಾಪುರ ಮೇಲೆ ಮುಗಿಬಿದ್ದಿದ್ದಾರೆ. ಕಿಚ್ಚ ಸುದೀಪ್ ಮುಂದೆ ಐಶ್ವರ್ಯಾ ಮಾತಾಡುತ್ತಿದ್ದರು. ಇದೇ ವೇಳೆ ಚೈತ್ರಾ ಕುಂದಾಪುರ ಸರ್ ನಾನು ಆ ತರ ಹೇಳಿಲ್ಲ, ಐಶ್ವರ್ಯಾ ಬೇರೆ ರೀತಿಯಲ್ಲಿ ಬಿಂಬಿಸುತ್ತಿದ್ದಾರೆ ಅಂತ ವಾದ ಮಾಡುತ್ತಾ ಇರುತ್ತಾರೆ.
ಆಗ ಐಶ್ವರ್ಯಾ ಹಾಗೂ ಚೈತ್ರಾ ಕುಂದಾಪುರ ಮಧ್ಯೆ ಕುಳಿತುಕೊಂಡಿದ್ದ ಮೋಕ್ಷಿತಾ ಏಕಾಏಕಿ ಎದ್ದು ಸರ್ ಎಷ್ಟು ಸುಳ್ಳು ಹೇಳುತ್ತಾರೆ ಇವರು ಅಂತ ಹೇಳಿದ್ದಾರೆ. ಆಗ ಚೈತ್ರಾ ಕುಂದಾಪುರ ಬಿಗ್ಬಾಸ್ ಮನೆಯಲ್ಲಿ ಸುಳ್ಳು ಹೇಳುತ್ತಾ ಇರುತ್ತಾರೆ ಅಂತ ಇನ್ನೂ ಕೆಲವರು ಕಿಚ್ಚ ಸುದೀಪ್ಗೆ ಹೇಳಿದ್ದಾರೆ. ಸದ್ಯ ಬಿಗ್ಬಾಸ್ ಮನೆಯಲ್ಲಿ ಒಟ್ಟು 10 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ವಾರದ ಸಂಚಿಕೆಯಲ್ಲಿ ಯಾರು ಬಿಗ್ಬಾಸ್ ಮನೆಯಿಂದ ಆಚೆ ಹೋಗಲಿದ್ದಾರೆ ಅಂತ ಕಾದು ನೋಡಬೇಕಿದೆ.