ಕನ್ನಡದ ಬಾದ್ಶಾ ಸುದೀಪ್ ಅವರು ಸ್ಯಾಂಡಲ್ವುಡ್ ನಲ್ಲಿ ಎಷ್ಟೋ ಖ್ಯಾತಿಯನ್ನು ಪಡೆದಿದ್ದಾರೆ. ಅಷ್ಟೇ ಅಲ್ಲದೆ ಕಿರುತೆರೆಯಲ್ಲೂ ಕೂಡ ಬಿಗ್ಬಾಸ್ ಮೂಲಕ ಬಹಳ ಹೆಸರು ಮಾಡಿ ನಾಡಿನ ಮನೆ ಮನೆಗಳಲ್ಲಿ ಮಾತಾಗಿದ್ದಾರೆ. ಅಭಿಮಾನಿಗಳಿಂದ ಹಿಡಿದು ಎಲ್ಲರನ್ನೂ ಪ್ರೀತಿಯಿಂದ ನೋಡುತ್ತಾರೆ. ಮತ್ತು ಸುದೀಪ್ ಅವರು ಕಳೆದ 10 ಸೀಸನ್ಗಳಿಂದ ಬಿಗ್ಬಾಸ್ ರಿಯಾಲಿಟಿ ಶೋ ಅನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದಾರೆ. ಸದ್ಯ ಈಗ ನಡೆಯುತ್ತಿರುವ ಬಿಗ್ಬಾಸ್ ಸೀಸನ್ 11ರ ಶೋನಲ್ಲೂ ಸುದೀಪ್ ಅಚ್ಚುಕಟ್ಟಾಗಿ ಎಲ್ಲವನ್ನು ನಿಭಾಯಿಸಿ ಯಶಸ್ವಿ ಕಂಡಿದ್ದಾರೆ. ಆದರೆ ಕಿಚ್ಚ ಸುದೀಪ್ ಅವರು ಇದೇ ನನ್ನ ಕೊನೆ ಬಿಗ್ಬಾಸ್ ಶೋ ಎಂದು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಈ ಮೊದಲು ಸಂದರ್ಶನ ಒಂದರಲ್ಲಿ ಮಾತನಾಡಿದ್ದ ಸುದೀಪ್ ಅವರು, ‘ಮುಂದೆ ಯಾರು ಬಿಗ್ ಬಾಸ್ ನಡೆಸಿಕೊಡುತ್ತಾರೆ ಅಥವಾ ಯಾರು ನಡೆಸಿಕೊಡಬೇಕು ಎಂದು ನಾನು ಹೇಳುವುದಿಲ್ಲ. ಕಲರ್ಸ್ನವರು ನಾನು ಬಿಡುವುದನ್ನು ಒಪ್ಪುತ್ತಿಲ್ಲ. ಮುಂದೆ ಮತ್ತೆ ನಾನೇ ಹೋಸ್ಟ್ ಮಾಡಬೇಕು ಎಂಬುದು ಅವರ ಆಸೆ ಆದರೆ ಇದು ನನ್ನ ಕೊನೆಯ ಸೀಸನ್ ಎಂದು ಹೇಳಿದ್ದರು.
ಇದೀಗ ಮತ್ತೆ ಸುದೀಪ್ ಅವರು ಸೋಶೀಯಲ್ ಮೀಡಿಯಾದಲ್ಲಿ ಕಲರ್ಸ್ ಕನ್ನಡಕ್ಕೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ಕನ್ನಡದಲ್ಲಿ ಬಿಗ್ಬಾಸ್ ಶೋ ಅನ್ನು ಆರಂಭದಿಂದಲೂ ಕಿಚ್ಚ ಸುದೀಪ್ ಅವರೇ ನಿರೂಪಣೆ ಮಾಡಿಕೊಂಡು ಬಂದಿದ್ದಾರೆ. ಒಂದಲ್ಲ, ಎರಡಲ್ಲ ಬರೋಬ್ಬರಿ 11 ಸೀಸನ್ಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ. ಬಿಗ್ ಬಾಸ್ ಶೋ ವೇಳೆ ತಮ್ಮ ಮಾತಿನ ಚಮತ್ಕಾರದಿಂದಲೇ ಇಡೀ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದರು. ಸ್ಪರ್ಧಿಗಳಿಗೆ ಯಾವುದನ್ನು ಹೇಗೆ ಹೇಳಬೇಕು ಹಾಗೇ ಹೇಳಿ, ಕೊನೆಗೆ ಉತ್ತರ ಕೊಡುತ್ತಿದ್ದರು.
ಆದರೆ, ಈಗ ಸುದೀಪ್ ಅವರು ಬಿಗ್ ಬಾಸ್ ತೊರೆಯುವ ಬಗ್ಗೆ ಗಟ್ಟಿ ನಿರ್ಧಾರ ಮಾಡಿದಂತೆ ಕಾಣುತ್ತಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ‘ಬಿಗ್ ಬಾಸ್ನ ಕಳೆದ 11 ಸೀಸನ್ಗಳಿಂದ ನಾನು ಆನಂದಿಸಿದ್ದೇನೆ. ನೀವು ತೋರಿದ ಎಲ್ಲಾ ಪ್ರೀತಿಗಾಗಿ ನಿಮ್ಮೆಲ್ಲರಿಗೂ ಧನ್ಯವಾದಗಳು. ಮುಂಬರುವ ಫಿನಾಲೆ, ಹೋಸ್ಟ್ ಆಗಿ ನನ್ನ ಕೊನೆಯ ಸೀಸನ್. ನಿಮ್ಮನ್ನು ಒಳ್ಳೆಯ ರೀತಿಯಲ್ಲಿ ರಂಜಿಸಿದ್ದೇನೆ ಎಂದು ನಾನು ಭಾವಿಸುತ್ತೇನೆ. ಇದೊಂದು ಅವಿಸ್ಮರಣೀಯ ಪಯಣ. ಅದನ್ನು ನನ್ನ ಕೈಲಾದಷ್ಟು ನಿಭಾಯಿಸಿದ್ದಕ್ಕೆ ನನಗೆ ಖುಷಿ ಇದೆ. ಈ ಅವಕಾಶಕ್ಕಾಗಿ ಕಲರ್ಸ್ ಕನ್ನಡಕ್ಕೆ ಧನ್ಯವಾದ’ ಎಂದಿದ್ದಾರೆ.