ಕನ್ನಡದ ಬಿಗ್ ರಿಯಾಲಿಟಿ ಶೋ ಆದ ಬಿಗ್ ಬಾಸ್ ಸೀಸನ್ 11 ಗ್ರ್ಯಾಂಡ್ ಫಿನಾಲೆಗೆ ಇನ್ನು ಒಂದೇ ವಾರ ಬಾಕಿ ಇದೆ. ಹೀಗಿರುವಾಗ ಬಿಗ್ ಬಾಸ್ ಮನೆಯಲ್ಲಿ ಉಳಿಯೋರು ಯಾರು? ಹೊರಗೆ ಬರೋರು ಯಾರು ಅನ್ನೋದು ಈಗ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಇಷ್ಟು ದಿನ ಬಿಗ್ಬಾಸ್ನಲ್ಲಿ ಆಡಿರುವುದಕ್ಕಿಂತ ಈಗ ಆಡುವುದು ಅತ್ಯಂತ ಇಂಪಾರ್ಟೆಂಟ್ ಆಗಿತ್ತು. ಸದ್ಯ ಇಂದು ರಾತ್ರಿ ನಡೆಯುವ ಕಿಚ್ಚನ ಪಂಚಾಯತಿಯೂ ಎಲ್ಲರ ಭವಿಷ್ಯವನ್ನು ನಿರ್ಧರಿಸಲಿದೆ.
ಬಿಗ್ಬಾಸ್ ಕನ್ನಡ ಸೀಸನ್ 11 ಮುಕ್ತಾಯವಾಗಲು ಕೆಲವೇ ಇನ್ನು ಒಂದು ವಾರವಷ್ಟೇ ಬಾಕಿ ಇದೆ. ಈ ಸೀಸನ್ನ ಕೊನೆ ಪಂಚಾಯಿತಿ ಇಂದು ನಡೆಯಲಿದೆ. ಸೀಸನ್ನ ಕೊನೆಯ ಪಂಚಾಯಿತಿ ಮಾಡಲು ಸುದೀಪ್ ತೋಳು ಮೇಲೇರಿಸಿಕೊಂಡು ಬಂದಿದ್ದಾರೆ. ಇದು ಧನರಾಜ್ಗೆ ನಡುಕ ಹುಟ್ಟಿಸಿದೆ. ಬಿಗ್ಬಾಸ್ ಇತಿಹಾಸದಲ್ಲಿ ಮೊದಲ ಬಾರಿಗೆ ಮಿಡ್ ವೀಕ್ ಎಲಿಮಿನೇಷನ್ ರದ್ದಾಗಿದೆ. ಇದಕ್ಕೆ ಧನರಾಜ್ ಕಾರಣವಾಗಿದ್ದಾರೆ. ಈ ಬಗ್ಗೆ ಸುದೀಪ್ ಮಾತನಾಡಲಿದ್ದಾರೆ. ಧನರಾಜ್ ಈಗಾಗಲೇ ತಪ್ಪು ಒಪ್ಪಿಕೊಂಡಿದ್ದಾರೆ. ಆದರೆ ಸುದೀಪ್ ಇದಕ್ಕೆ ಹೇಗೆ ಪ್ರತಿಕ್ರಿಯೆ ನೀಡಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ. ಮಾತ್ರವಲ್ಲದೆ ನಾಮಿನೇಷನ್ನಿಂದ ಈ ವಾರ ತಪ್ಪಿಸಿಕೊಳ್ಳುವರು ಯಾರೆಂಬುದು ಸಹ ಕುತೂಹಲ ಕೆರಳಿಸಿದೆ. ಎಲ್ಲಾ ಉತ್ತರಕ್ಕಾಗಿ ಇಂದಿನ ಎಪಿಸೋಡ್ ಉತ್ತರ ನೀಡಲಿದೆ.